ಬಳ್ಳಾರಿ : ಬಳ್ಳಾರಿಯಲಿ ಶಾಸಕ ಜನಾರ್ಧನ ಮನೆಯ ಮುಂದೆ ಬ್ಯಾನರ್ ಕಟ್ಟುವ ವಿಚಾರವಾಗಿ ಗಲಾಟೆ ನಡೆದು ಫೈರಿಂಗ್ ವೇಳೆ ಓರ್ವ ಕಾಂಗ್ರೆಸ್ ಕಾರ್ಯಕರ್ತ ಬಲಿಯಾಗಿದ್ದ ಇದೀಗ ಈ ಒಂದು ಘಟನೆಗೆ ಸಂಬಂಧಿಸಿದಂತೆ ಜನಾರ್ಧನ ರೆಡ್ಡಿ ಅವರ ಮನೆಗೆ ಬಾಂಬ್ ನಿಷ್ಕ್ರಿಯ ದಳ ಭೇಟಿ ನೀಡಿದೆ.
ಹೌದು ಗಲಾಟೆಯ ಸಂದರ್ಭದಲ್ಲಿ ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರು ಆಟೋಗಳಲ್ಲಿ ಪೆಟ್ರೋಲ್ ಬಾಂಬ್, ಬಾಟಲಿಗಳನ್ನು ತಂದಿದ್ದರು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಜನಾರ್ದನ ರೆಡ್ಡಿ ಮನೆಗೆ ಇಂದು ಬಾಂಬ್ ಸ್ಕಾರ್ಡ್ ಭೇಟಿ ನೀಡಿದ್ದು ತೀವ್ರ ಶೋಧ ನೆಡೆಸುತ್ತಿದೆ.ಬಳ್ಳಾರಿ ಅವಂಭಾವಿಯಲ್ಲಿರುವ ಶಾಸಕ ಜನಾರ್ಧನ್ ರೆಡ್ಡಿ ಮನೆಗೆ ಭೇಟಿ ನೀಡಿದ್ದು ಮನೆಯ ಬಳಿ ಇಂಚಿಂಚು ಪರಿಶೀಲನೆ ನಡೆಸುತ್ತಿದ್ದಾರೆ.
ಹುಬ್ಬಳ್ಳಿಯ ಬಾಂಬ್ ನಿಷ್ಕ್ರಿಯ ತಂಡದಿಂದ ಬುಲೆಟ್ ಗಳ ಹುಡುಕಾಟ ನಡೆಯುತ್ತಿದೆ. DSMD ಹಾಗು ಮಿಷನ್ಗಳ ಮೂಲಕ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಇಡೀ ಮನೆ ಶೋಧ ನಡೆಸುತ್ತಿದ್ದಾರೆ. ಘಟನಾ ಸ್ಥಳದ ಮೂಲೆ ಮೂಲೆಯನ್ನು ಸಿಬ್ಬಂದಿಗಳು ಸರ್ಚ್ ಮಾಡುತ್ತಿದ್ದಾರೆ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಎಫ್ ಎಸ್ ಎಲ್ ತಂಡ ಕೂಡ ಇದೆ.








