ಲಗ್ನ ಮಂಟಪದಲ್ಲಿರುವ ಮದುಮಕ್ಕಳನ್ನು “ಲಕ್ಷ್ಮಿನಾರಾಯಣ ಸ್ವರೂಪ” ಎಂದು ಪರಿಗಣಿಸುತ್ತೇವೆ. ವೈಕುಂಠದಲ್ಲಿ ಲಕ್ಷ್ಮಿ ಮತ್ತು ನಾರಾಯಣರು ಸದಾ ಜೊತೆ ಜೊತೆ ಯಾಗಿ ವಾಸಿಸುತ್ತಾರೆ. ಲಕ್ಷ್ಮಿ ದೇವಿ ಸಂಪತ್ತು -ಸೌಭಾಗ್ಯದ ಪ್ರತೀಕವಾದರೆ, ನಾರಾ ಯಣ ಧರ್ಮ- ಸತ್ಯ- ಶಾಂತಿಯ ಪ್ರತೀಕ. ಇವರ ಸುಖಿ ದಾಂಪತ್ಯ ನೋಡಿದ ದೇವತೆಗಳೆಲ್ಲ ಒಮ್ಮೆ ವೈಕುಂಠಕ್ಕೆ ಬಂದು ಲಕ್ಷ್ಮೀನಾರಾಯಣರಿಗೆ ನಮಸ್ಕರಿಸಿ, ನಾರಾಯಣನನ್ನು ಕುರಿತು ಪ್ರಭು ನಿಮ್ಮ ದಾಂಪತ್ಯವು, ಭೂ ಲೋಕಕ್ಕೆ ಮಾದರಿ ಯಾಗಿದೆ. ದಂಪತಿಗಳು ಬಾಳಿದರೆ ಲಕ್ಷ್ಮಿ ನಾರಾಯಣರಂತೆ ಬಾಳಬೇಕು ಎಂಬ ಲೋಕೋಕ್ತಿಯಿದೆ.
ಆದರೆ ಭೂಲೋಕದಲ್ಲಿ ಎಲ್ಲವೂ ಬದಲಾಗಿದೆ ದಂಪತಿಗಳಾದ ಗಂಡು ಹೆಣ್ಣು ಯಾವಾಗಲೂ ಕಲಹ, ಅಸಹನೆ, ಅತೃಪ್ತಿಯ ಕೊರತೆ ಎದ್ದು ಕಾಣುತ್ತದೆ. ದೀರ್ಘ ಕಾಲಾವಧಿಯ ಬದುಕು ಕಡಿಮೆಯಾಗುತ್ತಿದೆ. ಹೀಗಾದರೆ ಲೋಕದಲ್ಲಿ ಶಾಂತಿ ಹೇಗೆ ನೆಲೆಸುತ್ತದೆ ಎಂದು ಕೇಳಿದರು. ನಾರಾಯಣ ಅದೇ ಮುಗುಳ್ನಗೆಯೊಂದಿಗೆ, ಲಕ್ಷ್ಮಿಯ ಕಡೆ ನೋಡಿ ಇದು ನಿನ್ನ ಪ್ರಶ್ನೆ ನೀನೆ ಉತ್ತರ ಕೊಡು ಎಂದನು. ದೇವತೆ ಗಳು ಲಕ್ಷ್ಮಿಗೆ ದಾಂಪತ್ಯ ಜೀವನ ಧೀರ್ಘಕಾಲ ಸುಖವಾಗಿರಬೇಕಾದರೆ ಏನು ಮಾಡಬೇಕು ತಿಳಿಸಿ ತಾಯಿ ಎಂದರು.
ವಿವಾಹವಾದ ಮೇಲೆ ಗಂಡು ಹೆಣ್ಣು ಬಡತನವೋ, ಸಿರಿತನವೋ ಒಬ್ಬರನ್ನೊಬ್ಬರು ಅರಿತು ಬಾಳಬೇಕು. ದಾಂಪತ್ಯ ಪರಸ್ಪರರಲ್ಲಿ ಕನ್ನಡಿಯಂತೆ ಇರಬೇಕು. ಒಬ್ಬರಿಗೆ ಕೋಪ ಬಂದಾಗ ಇನ್ನೊಬ್ಬರಿಗೆ ತಾಳ್ಮೆ ಇರಬೇಕು. ಒಬ್ಬರು ಅಸಹನೆ ತೋರಿಸಿದರೆ ಮತ್ತೊಬ್ಬರು ಪ್ರೀತಿ ಕೊಡ ಬೇಕು. ಹೀಗಾದರೆ ಮಾತ್ರ ಮನೆ ಪ್ರೇಮ ಮಂದಿರವಾಗುತ್ತದೆ. ಅಲ್ಲದೆ ಸಂಪತ್ತಿ ದ್ದರೂ ಧರ್ಮವಿಲ್ಲದ ಮನೆ ಕುಸಿಯುತ್ತದೆ, ಹಾಗೆ ಧರ್ಮವಿದ್ದರೂ ಪ್ರೀತಿ ಇಲ್ಲದ ಮನೆ ಬರಿದಾಗುತ್ತದೆ. ಧರ್ಮ ಮತ್ತು ಪ್ರೀತಿ ಒಟ್ಟಿಗೆ ಇದ್ದಾಗ ಸಂಪತ್ತು -ಸಂತೋಷ ಶಾಶ್ವತವಾಗಿ ಇರುತ್ತದೆ.
ನಾರಾಯಣ ಹೇಳಿದ ಲಕ್ಷ್ಮಿಯ ಮಾತು ಸತ್ಯ. ದಾಂಪತ್ಯ ಎಂದರೆ ಸ್ಪರ್ಧೆ ಅಲ್ಲ. ಅದು ಏಳೇಳು ಜನ್ಮದ ಅನುಬಂಧ. ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ವಾಗಿರುತ್ತದೆ. ಅದರಂತೆಯೇ ವಿವಾಹ ಬಂಧನ ವಾಗುವುದು. ಗಂಡು ಮತ್ತು ಹೆಣ್ಣಿನ ಗುಣಗಳು ವಿಭಿನ್ನವಾಗಿದ್ದರೂ ಅದು ಒಂದಕ್ಕೊಂದು ಹೊಂದಿಕೊಂಡು ಜೀವನದಲ್ಲಿ ಸಂತೋಷವನ್ನು ಸೃಷ್ಟಿಸುತ್ತದೆ. ಆದರೆ ಇಂದಿನ ದಂಪತಿಗಳು ಹೆಚ್ಚು ಹೆಚ್ಚು ಸಂಪತ್ತು ಹಣ ಇದರ ಬಗ್ಗೆ ಚರ್ಚಿಸುತ್ತಾರೆ. ದೊಡ್ಡಮನೆ ಕಾರು ಬೆಲೆಬಾಳುವ ವಸ್ತ್ರ ಒಡವೆ, ಹೇಗೆ ಏನೇನು ಬಯಸಿ ಸುಖದ ಸಾರವನ್ನು ಅರ್ಥಮಾಡಿಕೊಳ್ಳದೆ ಜಗಳಕ್ಕೆ ಕಾರಣವಾಗುತ್ತದೆ. ಸಂಪತ್ತು ಎಂದರೆ ಹೆಣ್ಣಿನ ಸೌಭಾಗ್ಯ, ಮುದ್ದಾದ ಮಕ್ಕಳು, ಉಳಿದ ಸಂಪತ್ತು ಮನೆ, ಆಸ್ತಿ, ಒಡವೆ, ಡೆಪಾಸಿಟ್ ಹೆಚ್ಚಲ್ಲ ಕಾಲ ಬಂದಾಗ ಕೂಡಿ ಬರುತ್ತದೆ.
ಹುಡುಗಿ ಅತಿ ಸುಂದರವಾಗಿ ಇರಬೇಕು ಎಂದಿಲ್ಲ. ಆದರೆ ಗಂಡನ ಪಕ್ಕದಲ್ಲಿ ನಿಂತರೆ ಜೋಡಿ ಚೆನ್ನಾಗಿ ರಬೇಕು. ಹೈ ಫೈ ಡಿಗ್ರಿಗಳು, (ಓದು) ದೊಡ್ಡ ಕಂಪನಿ ಉದ್ಯೋಗ ಇರಬೇಕೆಂದೇನೂ ಇಲ್ಲ. ಮನೆ ನಿಭಾಯಿಸುವಷ್ಟು ವ್ಯವಹಾರ ಜ್ಞಾನ, ತನ್ನ ಮಕ್ಕಳಿಗೆ ಹೋಂ ವರ್ಕ್ ಮಾಡಿಸುಷ್ಟು ವಿದ್ಯೆ ಕಲಿತಿದ್ದರೆ ಸಾಕು. ತುಂಬಾ ರುಚಿಯಾಗಿ ಅಡಿಗೆ- ತಿಂಡಿ ಬರಬೇಕೆಂದೇನೂ ಇಲ್ಲ. ಅಡಿಗೆ ತಿಂಡಿ ಮಾಡುವ ಪರಿಚಯ ಹಾಗೂ ಅಡುಗೆ ಮನೆ ನಿಭಾಯಿ ಸುವಷ್ಟು ತಿಳುವಳಿಕೆ ಇರಬೇಕು. ಗಂಡ ಹೆಂಡತಿ ಮಧ್ಯೆ ಜಗಳ ಬರಬಾರದೆಂದು ಇಲ್ಲ. ಗಂಡನ ಜೊತೆ ಜಗಳ ಆಡಿದ ಮಾತ್ರಕ್ಕೆ ಗಂಡನನ್ನು ತೊರೆದು ಹೋಗದೆ ಇದ್ದರೆ ಸಾಕು.
ವಿವಾಹ ಆದ ಮೇಲೆ ಹೊಂದಿಕೊಳ್ಳಬೇಕು. ಪತಿಯ ಕೆಲವು ವಿಚಾರಗಳು, ಅಥವಾ ಪತ್ನಿಯ ಕೆಲವು ನಡೆಗಳು ಒಪ್ಪಿಗೆಯಾಗದಿದ್ದರೂ ಸುಧಾರಿಸಿ ತಿದ್ದಿಕೊಂಡು ಬಾಳ್ವೆ ಮಾಡಬೇಕು. ಪತ್ನಿಗೆ ಪತಿ ಅನ್ನುವ ಗೌರವ ಇರಲಿ, ಹಾಗೆ ಪತಿಗೆ ತನ್ನ ಪತ್ನಿ ಎನ್ನುವ ಪ್ರೀತಿ ಇರಲಿ. ಜೀವನ ಸುಂದರವಾಗಿರುತ್ತದೆ. ಜಗಳದಲ್ಲಿ ಒಬ್ಬರು ಸ್ವಲ್ಪ ಸೋಲಬೇಕು. ಇದರಿಂದ ನಮ್ಮ ಮರ್ಯಾದೆ ಕಮ್ಮಿ ಆಗುವುದಿಲ್ಲ. ಬದಲಾಗಿ ನಮ್ಮ ಬಗ್ಗೆ ಗೌರವ, ಕಾಳಜಿ ಹೆಚ್ಚಾಗುತ್ತದೆ. ಸಾವಿರ ತಪ್ಪುಗಳಿದ್ದರೂ ಸರಿ ಮಾಡಿಕೊಂಡು ಇಬ್ಬರು ಜೀವನಪೂರ್ತಿ ಸಂತೋಷದಿಂದ ಜೊತೆಯಲ್ಲಿ ಬಾಳಬೇಕು ಅದೇ ಸುಂದರವಾದ ದಾಂಪತ್ಯ.
ಎಲ್ಲಾ ಹೆಣ್ಣು- ಗಂಡುಗಳು ಹೀಗೆ ಇರುತ್ತಾರೆ ಎಂದಲ್ಲ. ಕಟ್ಟಿಕೊಂಡಿರುವನನ್ನು ಬಿಟ್ಟರೆ ಅವನಿಗಿಂತ ಒಳ್ಳೆಯವರು ಸಿಗುತ್ತಾರೆ ಎನ್ನುವುದು ಭ್ರಮೆ, ಇರುವ ಗಂಡನನ್ನು- ಹೆಂಡತಿಯನ್ನು ಬಿಟ್ಟು ಬೇರೆ ಮದುವೆ ಅಥವಾ ಅಂತ ಹೋದವರ್ಯಾರು ಉದ್ಧಾರ ಆಗಿಲ್ಲ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಬೆರಳೆಣಿಕೆಯಷ್ಟು ಮಾತ್ರ ಎರಡನೇ ಮದುವೆಯ ಸುಖ- ಸಂತೋಷ ಸಿಗಬಹುದು. ಮದುವೆಯಾದ ಗಂಡ ಅಥವಾ ಹೆಂಡತಿ , ಸಂಸಾರದಿಂದ ಹೊರ ಹೋದರೆ.ಆ ಜೀವನ ಯಾವತ್ತು ಒಂಟಿ ಬಡಕ ಜೀವನವಾಗುತ್ತದೆ. ವಯಸ್ಸಾದಂತೆ ಸೌಂದರ್ಯ ಬಾಡುತ್ತದೆ. ಗಂಡಾಗಲಿ ಹೆಣ್ಣಾಗಲಿ ಒಮ್ಮೆ ವಿವಾಹ ಆದಮೇಲೆ ಒಬ್ಬರಿಗೊಬ್ಬರು ವಿವೇಕದಿಂದ ಅರಿತು ಹೊಂದಿಕೊಂಡಿರಬೇಕು. ಬಿಟ್ಟರೆ ಮತ್ತೊಂದು ಚಂದದ ಸಂಸಾರ ಸಿಗುವುದಿಲ್ಲ.
ಮದುವೆಯ ಈ ಬಂಧ ಅನುರಾಗದ ಅನುಬಂಧ
ಏಳೇಳು ಜನುಮದಲೂ ತೀರದ ಸಂಬಂಧ!!








