ಮಂಡ್ಯ : ತಿಥಿ ಸಿನಿಮಾ ಖ್ಯಾತಿಯ ಸೆಂಚೂರಿ ಗೌಡ ನಿಧನರಾಗಿದ್ದಾರೆ. ಸಂಗ್ರೇಗೌಡ ಅಲಿಯಾಸ್ ಸೆಂಚೂರಿ ಗೌಡ ನಿನ್ನೆ ರಾತ್ರಿ ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ ಸಿಂಗರೇಗೌಡನ ಕೊಪ್ಪಲು ಗ್ರಾಮದಲ್ಲಿ ಸೆಂಚುರಿ ಗೌಡ ನಿಧನರಾಗಿದ್ದಾರೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಸಿಂಗ್ರೇಗೌಡನ ಕೊಪ್ಪಲಿನಲ್ಲಿ ಸಿಂಗ್ರೇಗೌಡ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದು, ನಿನ್ನೆ ರಾತ್ರಿ ಅವರು ನಿಧನರಾಗಿದ್ದಾರೆ. ತಿಥಿ ಸಿನಿಮಾ ಮೂಲಕ ಸೆಂಚುರಿ ಗೌಡ ಎಂದು ಸಂಗ್ರೇಗೌಡ ಖ್ಯಾತಿ ಪಡೆದಿದ್ದರು ಇಂದು ಸಂಗ್ರೇಗೌಡನ ಕೊಪ್ಪಲಿನಲ್ಲಿ ಸೆಂಚುರಿ ಗೌಡ ಅಂತ್ಯ ಸಂಸ್ಕಾರ ನೆರವೇರಲಿದೆ. ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ, ಇದೇ ತಿಥಿ ಸಿನಿಮಾ ಮೂಲಕ ಖ್ಯಾತಿಯಾಗಿದ್ದ ಗಡ್ಡಪ್ಪ ಅವರು ಸಹ ನಿಧನರಾಗಿದ್ದರು.








