ಬೆಂಗಳೂರು: ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 23 ಮತ್ತು 24ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನಡೆಸಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.
UGCET-26: 2026ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (UGCET-26) ಯನ್ನು ಏಪ್ರಿಲ್ 23 ಮತ್ತು 24ರಂದು ನಡೆಸಲಾಗುವುದು ಎಂದು ಡಾ.ಎಂ.ಸಿ ಸುಧಾಕರ್ ಘೋಷಿಸಿದ್ದಾರೆ. ಹೊರನಾಡು ಮತ್ತು ಗಡಿ ನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಏ.22ರಂದು ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆ ಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಜನವರಿ 17ರಿಂದ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಸಚಿವರು ಇತರ ಪರೀಕ್ಷೆಗಳ ವೇಳಾ ಪಟ್ಟಿಯನ್ನೂ ಪ್ರಕಟಿಸಿದರು. ಕ್ರೈಸ್ ಪರೀಕ್ಷೆ ಮಾರ್ಚ್ 1, ಪಿಜಿಸಿಇಟಿ (ಎಂಬಿಎ, ಎಂಸಿಎ) ಪರೀಕ್ಷೆ ಮೇ 14ರಂದು, ಪಿಜಿಸಿಇಟಿ (ಎಂಇ/ಎಂ.ಟೆಕ್) ಹಾಗೂ ಡಿಸಿಇಟಿ ಪರೀಕ್ಷೆಗಳು ಮೇ 23ರಂದು ನಡೆಯಲಿವೆ. ಎಂಎಸ್ಸಿ ನರ್ಸಿಂಗ್, ಎಂಪಿಟಿ, ಎಂ.ಎಸ್ಸಿ-ಎಎಚ್ ಎಸ್ ಪರೀಕ್ಷೆ ಗಳು ಜು.18ರಂದು, ಅಕ್ಟೋಬರ್ 11ರಂದು ಕೆಸೆಟ್ ಹಾಗೂ ನವೆಂಬರ್ 21ರಂದು ಎಂ-ಫಾರ್ಮಾ ಹಾಗೂ ಫಾರ್ಮಾ-ಡಿ ಪರೀಕ್ಷೆ ಗಳನ್ನು ನಡೆಸಲಾಗುವುದು ಎಂದು ಸಚಿವರು ಘೋಷಿಸಿದರು.
ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 23 ಮತ್ತು 24ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನಡೆಸಲಿದ್ದು, ಜನವರಿ 17ರಿಂದ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. pic.twitter.com/oPudKuJe2e
— DIPR Karnataka (@KarnatakaVarthe) January 3, 2026








