Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

BREAKING: ಎಲೋನ್ ಮಸ್ಕ್ ಒಡೆತನದ ‘SpaceX’ ಮತ್ತು ‘Starlink’ ಅನ್ನು ಮಿಲಿಟರಿ ಟಾರ್ಗೆಟ್ ಎಂದು ಘೋಷಿಸಿದ ಇರಾನ್!

​ಜುಲೈ 15ರೊಳಗೆ ಬರಲಿದೆ ಹೊಸ ರೂಪದ ‘IRCTC’ ವೆಬ್‌ಸೈಟ್: ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಆಗಲಿವೆ ಭಾರಿ ಬದಲಾವಣೆಗಳು!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಭಾಪತಿ ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ನಲ್ಲಿ ಕೈಗೊಂಡ ನೇರ ನೇಮಕಾತಿ ಪ್ರಕ್ರಿಯೆ ಮಾದರಿ: ಸಿಎಂ ಸಿದ್ದರಾಮಯ್ಯ
KARNATAKA

ಸಭಾಪತಿ ಬಸವರಾಜ ಹೊರಟ್ಟಿ ವಿಧಾನ ಪರಿಷತ್‌ನಲ್ಲಿ ಕೈಗೊಂಡ ನೇರ ನೇಮಕಾತಿ ಪ್ರಕ್ರಿಯೆ ಮಾದರಿ: ಸಿಎಂ ಸಿದ್ದರಾಮಯ್ಯ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸಭಾಪತಿ ಹೊರಟ್ಟಿಯವರಿಂದ ಕರ್ನಾಟಕ ವಿಧಾನ ಪರಿಷತ್‌ನಲ್ಲಿ ಕೈಗೊಂಡ ನೇರ ನೇಮಕಾತಿ ಪ್ರಕ್ರಿಯೆ ಮಾದರಿಯಾದದ್ದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ವಿಧಾನ ಪರಿಷತ್ತಿನ ಸಚಿವಾಲಯದಲ್ಲಿನ ವೃಂದ ಮತ್ತು ನೇಮಕಾತಿ ನಿಯಮಗಳನ್ನು ಸಮಗ್ರವಾಗಿ ಇತ್ತೀಚಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಇಲಾಖೆ ಶ್ರೀಮತಿ ಹೇಮಲತಾ ಐ.ಎ.ಎಸ್ ಇವರ ಅಧ್ಯಕ್ಷತೆಯಲ್ಲಿ ಪರಿಸ್ಕರಿಸಿ ನೇರ ನೇಮಕಾತಿ ಮತ್ತು ಪದೋನ್ನತಿಗೆ ಹುದ್ದೆಗಳನ್ನು ನಿಯಮಾನುಸಾರ 50:50 ಅನುಪಾತದಲ್ಲಿ ನಿಗದಿಪಡಿಸಿ ಅದರ ಆಧಾರದ ಮೇಲೆ ನೇರ ನೇಮಕಾತಿಗೆ ಮೀಸಲಾಗಿದ್ದ ಹುದ್ದೆಗಳಿಗೆ ಪರಿಷತ್ತಿನ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆ.ಇ.ಎ) ಮೂಲಕ ಆಯ್ಕೆ ಮಾಡಲು ನಿರ್ಧರಿಸಿ, ಅತ್ಯಂತ ಪಾರದರ್ಶಕವಾಗಿ ಲಿಖಿತ ಪರೀಕ್ಷೆ ನಡೆಸಿ 1:5 ಅನುಪಾತದಲ್ಲಿ ಮೆರಿಟ್ ಪಟ್ಟಿ ಪಡೆದು 1:1 ಅನುಪಾತ ಆಯ್ಕೆ ಪಟ್ಟಿ ತಯಾರಿಸುವಲ್ಲಿ ಅನುಮಾನ ಗೊಂದಲಗಳಿಗೆ ಆಸ್ಪದ ನೀಡದಂತೆ ಮತ್ತು ಪಾರದರ್ಶಕವಾಗಿ ನಡೆಸುವ ದೃಡಸಂಕಲ್ಪದಿಂದ ಸಭಾಪತಿ ಹೊರಟ್ಟಿಯವರು ಅವರು 1:5 ಅನುಪಾತದ ಆಯ್ಕೆ ಪಟ್ಟಿಯಲ್ಲಿನ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲಯನ್ನು ವೃತ್ತಿ ಪರತೆಯಿಂದ ಕೈಗೊಳ್ಳಲು ಹೊರ ರಾಜ್ಯದ ಕೇಂದ್ರ ಸರ್ಕಾರ ಸ್ವಾಮ್ಯದ ಸ್ವಾಪ್ಟವೇರ ಟೆಕ್ನೋಲಾಜಿ ಪಾರ್ಕ ಆಫ್ ಇಂಡಿಯಾ (ಎಸ್.ಟಿ.ಪಿ.ಐ) ಅಧಿಕಾರಿಗಳನ್ನು ನಿಯೋಜಿಸಿ ತಂತ್ರಾಂಶ ಅಭಿವೃದ್ಧಿ ಸಾಮರ್ಥ್ಯ ಮತ್ತು ಗಣಕಯಂತ್ರ ಬಳಕೆ ಸಾಮರ್ಥ್ಯ ಪರೀಕ್ಷೆ ನಡೆಸಿರುವುದು ಮತ್ತು ಲಿಪಿಕ ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ದೇಶಕರು, ಭಾಷಾಂತರ ನಿರ್ದೇಶನಾಲಯ, ಕರ್ನಾಟಕ ಸರ್ಕಾರ ಇವರನ್ನು ಒಳಗೊಂಡ ಆಯ್ಕೆ ಸಮಿತಿಯನ್ನು ರಚಿಸಿ ಲಿಖಿತ ಪರೀಕ್ಷೆ ಅಂಕಗಳನ್ನು ಮಾತ್ರ ಆಧಾರವಾಗಿಟ್ಟು ಅಂತಿಮ ಆಯ್ಕೆ ಪಟ್ಟಿ ತಯಾರಿಸುವ ಮೂಲಕ ನಡೆಸಿರುವುದು ಕಂಡು ಬಂದಿದೆ. ಮೇಲಿನ ಎಲ್ಲಾ ಪ್ರಕ್ರಿಯೆಗಳನ್ನು ಕೈಗೊಳ್ಳುವಾಗ ಕಡ್ಡಾಯವಾಗಿ ಸಿ.ಸಿ ಕ್ಯಾಮೆರಾಗಳ ಕಣ್ಗಾವಲಿನಲ್ಲಿ ನಡೆಸಿರುವುದು ಅತ್ಯಂತ ಪಾರದರ್ಶಕವಾಗಿ ಮತ್ತು ವೃತ್ತಿಪರತೆಯಿಂದ ಅಂತಿಮ ಅಂಕಪಟ್ಟಿ ಸಿದ್ಧಪಡಿಸಿದ್ದು ಅದಕ್ಕೆ ಮಾನ್ಯ ಮುಖ್ಯಮಂತ್ರಿಗಳು ಸಾಂಕೇತಿಕವಾಗಿ ನೇಮಕಾತಿ ಆದೇಶ ಪತ್ರಗಳನ್ನು ನೀಡಿರುವುದು ಅತ್ಯಂತ ಪ್ರಶಂಸನೀಯ ಮತ್ತು ಇತರೆ ಸರ್ಕಾರಿ ಇಲಾಖೆಗಳಿಗೆ ಮಾದರಿಯಾಗಿದೆ ಎಂದು ಸಭಾಪತಿಯವರಿಗೆ ಅಭಿನಂದನೆ ತಿಳಿಸಿದರು.

ಸದರಿ ಆಯ್ಕೆ ಪಟ್ಟಿಯಲ್ಲಿ ಸ್ಥಾನ ಪಡೆದವರು ಹೆಚ್ಚಿನವರು ಗ್ರಾಮೀಣ ಪ್ರತಿಭೆಗಳು ಮತ್ತು ಪದವಿಗಳ, ಸ್ನಾತಕೋತ್ತರ ಪದವಿಗಳಲ್ಲಿ ರ‍್ಯಾಂಕ್ ವಿಜೇತರು ಸೇರಿರುವದು ಅಭಿನಂದನೀಯ ಮತ್ತು ಒಬ್ಬ ಮಹಿಳಾ ಅಭ್ಯರ್ಥಿಯ ಇಬ್ಬರೂ ಪೋಷಕರು ಅಂಧರಾಗಿದ್ದು, ಅವರ ಮಗಳು ಆಯ್ಕೆಯಾಗಿರುವದಾಗಿ ಹೊರಟ್ಟಿಯವರು ಮಾನ್ಯ ಮುಖ್ಯಮಂತ್ರಿಗಳಿಗೆ ತಿಳಿಸಿದರು. ಪ್ರತಿಯಾಗಿ ಮಾನ್ಯ ಮುಖ್ಯಮಂತ್ರಿಗಳು ಅಭ್ಯರ್ಥಿಯ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿ ಶುಭ ಕೋರಿ ಹೊರಟ್ಟಿ ಅಂತ ಸಭಾಪತಿ ಇದ್ದಲ್ಲಿ ಇಂತಹ ಆಯ್ಕೆಗಳು ಆಗಬಹುದಾಗಿದೆ ಎಂದು ಹೆಮ್ಮೆಯಿಂದ ತಿಳಿಸಿದರು.

ಇದೇ ರೀತಿ ಹಲವಾರು ಆಡಳಿತಾತ್ಮಕ ಕಾರಣಗಳಿಂದ ವರ್ಷಗಟ್ಟಲೇ ಪದೋನ್ನತಿಯಿಂದ ವಂಚಿತರಾಗಿರುವ ಪರಿಷತ್ ಅಧಿಕಾರಿಗಳು ಹಾಗೂ ನೌಕರರಿಗೆ ವಿಶೇಷವಾಗಿ ಸಂವಿಧಾನದ ಆಶಯದಂತೆ ಅನುಚ್ಛೇದ-16ರಲ್ಲಿ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳು, ಅನುಚ್ಛೇದ 371-ಎ ರಡಿ ಕಲ್ಯಾಣ ಕರ್ನಾಟಕ ಮೀಸಲಾತಿಯಡಿ ಪದೋನ್ನತಿ ನೀಡುವಲ್ಲಿ ಪದೇ-ಪದೇ ಆಡಳಿತಾತ್ಮಕ ಗೊಂದಲಗಳನ್ನು ಸೃಷ್ಠಿಸಿ ಪದೋನ್ನತಿ ಪ್ರಕ್ರಿಯೆ ಮುಂದೂಡುತ್ತಿರುವದನ್ನು ಗಮನಿಸಿ ಪ್ರಥಮ ಬಾರಿಗೆ ಇಲಾಖೆಯೇತರ ಉನ್ನತ ಅಧಿಕಾರಿಗಳಾದ ಗೌರವ ಗುಪ್ತಾ ಭಾ.ಆ.ಸೇ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರ ಅಧ್ಯಕ್ಷತೆಯಲ್ಲಿ ಇಲಾಖಾ ಪದೋನ್ನತಿ ಸಮಿತಿ ರಚಿಸಿ ಅತ್ಯಂತ ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ಪದೋನ್ನತಿ ಆದೇಶಗಳನ್ನು ಸಿ.ಆ.ಸು.ಇ ಸುತ್ತೋಲೆಗಳ ಪ್ರಕಾರ ಸುಮಾರು 42 ಅಧಿಕಾರಿಗಳು/ಸಿಬ್ಬಂದಿಗಳಿಗೆ ಪದೋನ್ನತಿ ನೀಡಿರುತ್ತಾರೆ.

ಒಟ್ಟಾರೆಯಾಗಿ ಮಾನ್ಯ ಸಭಾಪತಿ ಹೊರಟ್ಟಿಯವರು, ಕರ್ನಾಟಕ ವಿಧಾನ ಪರಿಷತ್‌ದಲ್ಲಿ ನೇರ ನೇಮಕಾತಿ ಮತ್ತು ಪದೋನ್ನತಿಗಳನ್ನು ನೀಡುವಲ್ಲಿ ವಿಶೇಷವಾಗಿ ಸಂವಿಧಾನದ ಆಶಯದಂತೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಕಲ್ಯಾಣ ಕರ್ನಾಟಕದ ಮೀಸಲಾತಿ 371-ಎ ನಿಯಮಗಳಂತೆ ಪಾರದರ್ಶಕವಾಗಿ ನೇರ ನೇಮಕಾತಿ ಮತ್ತು ಪದೋನ್ನತಿಗಳನ್ನು ನೀಡಿರುವುದು ಇತರೆ ಇಲಾಖೆಗಳಿಗೆ ಮಾದರಿಯಾಗಿದೆ.

ಅಮೃತಸರದಲ್ಲಿ ಮದುವೆ ಸಮಾರಂಭದಲ್ಲೇ ಎಎಪಿ ಸರಪಂಚ್ ಜರ್ನೈಲ್ ಸಿಂಗ್ ಅನ್ನು ಗುಂಡಿಕ್ಕಿ ಹತ್ಯೆ

ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ: ಕಲಾವಿದರು, ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ-ಸಿಎಂ ಸಿದ್ದರಾಮಯ್ಯ

Share. Facebook Twitter LinkedIn WhatsApp Email

Related Posts

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

2 Mins Read

GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ

1 Min Read

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

1 Min Read
Recent News

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

BREAKING: ಎಲೋನ್ ಮಸ್ಕ್ ಒಡೆತನದ ‘SpaceX’ ಮತ್ತು ‘Starlink’ ಅನ್ನು ಮಿಲಿಟರಿ ಟಾರ್ಗೆಟ್ ಎಂದು ಘೋಷಿಸಿದ ಇರಾನ್!

​ಜುಲೈ 15ರೊಳಗೆ ಬರಲಿದೆ ಹೊಸ ರೂಪದ ‘IRCTC’ ವೆಬ್‌ಸೈಟ್: ರೈಲು ಟಿಕೆಟ್ ಬುಕಿಂಗ್ ಪ್ರಕ್ರಿಯೆಯಲ್ಲಿ ಆಗಲಿವೆ ಭಾರಿ ಬದಲಾವಣೆಗಳು!

​ಬಾದಾಮಿ ಖರೀದಿಯಲ್ಲಿ ₹82 ರೂಪಾಯಿ ವಂಚನೆ: ಗ್ರಾಹಕ ನ್ಯಾಯಾಲಯದಲ್ಲಿ ಹೋರಾಡಿ ₹7,000 ಪರಿಹಾರ ಗೆದ್ದ ಗ್ರಾಹಕ!

State News
KARNATAKA

BIG NEWS: ಸಾಗರದಲ್ಲಿ ‘ಪೆಟ್ರೋಲ್ ಕದಿಯೋ ಗ್ಯಾಂಗ್’ ಆಕ್ಟೀವ್: ಬಸ್, ರೈಲ್ವೆ ನಿಲ್ದಾಣದ ‘ಬೈಕ್’ಗಳೇ ಕಳ್ಳರ ಟಾರ್ಗೆಟ್!

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ದಿನದಿಂದ ದಿನಕ್ಕೆ ಪೆಟ್ರೋಲ್ ದರ ಗಗನಕ್ಕೇರುತ್ತಿರುವ ಬೆನ್ನಲ್ಲೇ, ವಾಹನ ಸವಾರರ ಜೇಬಿಗೆ ಕತ್ತರಿ ಹಾಕಲು ವಿನೂತನ ಕಳ್ಳರ ಗ್ಯಾಂಗ್…

GOOD NEWS: ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಇನ್ಮುಂದೆ 10 ಕೆಜಿ ಅಕ್ಕಿ ವಿತರಣೆಗೆ ಸರ್ಕಾರದ ಆದೇಶ

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಕೋರ್ಟ್‌ಗೆ ದೋಷಾರೋಪಣೆ ಪಟ್ಟಿ ಸಲ್ಲಿಕೆ

GOOD NEWS: ರಾಜ್ಯದ ವಿದ್ಯಾರ್ಥಿಗಳಿಗೆ ಬಂಪರ್ ಗಿಫ್ಟ್: ಇನ್ನೆರಡು ದಿನದಲ್ಲಿ ‘ಉಚಿತ ಬಸ್ ಪಾಸ್’ ವಿತರಣೆ ಪ್ರಕ್ರಿಯೆ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.