ಶಿವಮೊಗ್ಗ: ಅರಣ್ಯ ಇಲಾಖೆಯ ಪ್ರಯತ್ನದಿಂದ ಕಾಡಾನೆಗಳು ಸುರಕ್ಷಿತವಾಗಿ ಅಂಬ್ಳಿಗುಳ ಜಲಾಶಯದಾಟಿ ಹೋಗಿದೆ ಇಲ್ಲಿನ ಜನರು ಆತಂಕ ಪಡುವ ಅಗತ್ಯವಿಲ್ಲ ಎಚ್ಚರಿಕೆಯಿಂದ ಇರಬೇಕು ಎಂದು ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ತುತ್ತಾಗಿ ಬೆಳೆ ನಾಶ ಹೊಂದಿದ್ದಂತ ರೈತರ ಜಮೀನುಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಸ್ಥಳದಲ್ಲೇ ರೈತರಿಗೆ ವೈಯಕ್ತಿಕವಾಗಿ ಆರ್ಥಿಕ ನೆರವಿನ ಪರಿಹಾರ ವಿತರಿಸಿಸಿದರು.

ಈ ಬಳಿಕ ಮಾತನಾಡಿದಂತ ಅವರು ಬೆಳೆ ನಷ್ಟಕ್ಕೆ ಪರಿಹಾರ ರೂಪದಲ್ಲಿ ಬಾಳೆ ಗಿಡ ಒಂದಕ್ಕೆ 200 ರೂ ಅಡಿಕೆ ಮತ್ತು ತೆಂಗಿನ ಗಿಡ ಹಾಳಾಗಿದ್ದರೆ ಗಿಡಕ್ಕೆ 800 ರೂ ಪರಿಹಾರ ಸರ್ಕಾರದಿಂದ ನೀಡಲಾಗುತ್ತದೆ ಎಷ್ಟು ಹಾನಿಯಾಗಿದೆ ಎಂಬುದರ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ನಷ್ಟಕ್ಕೆ ಒಳಗಾದ ತೋಟಗಳನ್ನು ಸರ್ವೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಕಾಡಾನೆಗಳು ಹೆಚ್ಚಾಗಿ ಬಾಳೆ ಗಿಡಗಳನ್ನು ಹಾಳು ಮಾಡಿವೆ. ಅಡಿಕೆ ಮರಗಳಿಗೆ ಹೆಚ್ಚು ಹಾನಿಯಾಗಿಲ್ಲ. ಕಾಡಿನಂಚಿನಲ್ಲಿರುವ ತೋಟಗಳಿಗೆ ಸಹಜವಾಗಿ ಕಾಡುಪ್ರಾಣಿಗಳು ದಾಳಿ ಮಾಡುತ್ತದೆ. ಇದಕ್ಕೆ ಸರ್ಕಾರದ ಮಟ್ಟದಲ್ಲಿ ಸೂಕ್ತ ಪರಿಹಾರ ಕೊಡಿಸೋದಕ್ಕೆ ಸಂಬಂಧ ಪಟ್ಟ ಸಚಿವರು ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮ ವಹಿಸೋದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ನಾಡವಳ್ಳಿ ದೇವಾಲಯಕ್ಕೆ ಭೇಟಿ ನೀಡಿ ಊರಿನ ನೆಮ್ಮದಿಗೆ ಶಾಲೆ, ದೇವಸ್ಥಾನ ಸುಸ್ಥಿತಿಯಲ್ಲಿ ಇರಬೇಕು. ದೇವಾಲಯದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಕೈಜೋಡಿಸಬೇಕು. ಇಲ್ಲಿನ ಪುಷ್ಕರಣಿ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ನೀಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಾಗರ ತಹಶೀಲ್ದಾರ್ ರಶ್ಮಿ, ಎಸಿಎಫ್ ರವಿ, ಆರ್ ಎಫ್ ಓ ಅಣ್ಣಪ್ಪ, ಶಾಂತಪ್ಪ ಪೂಜಾರ್, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ಲೋಕಪ್ಪ, ಪ್ರಮುಖರಾದ ಕಲಸೆ ಚಂದ್ರಪ್ಪ, ಸೋಮಶೇಖರ್ ಲಾವಿಗ್ಗೆರೆ, ಸುಭಾಶ್ಚಂದ್ರ, ಅಶೋಕ್ ಬೇಳೂರು, ಕಿರಣ್ ದೊಡ್ಮನೆ, ಪಿಡಿಒ ವಿಮಲಾಕ್ಷಿ ಇನ್ನಿತರರು ಇದ್ದರು.
SHOCKING: ಮೂರು ಹೆಣ್ಣುಮಕ್ಕಳು ಎಂದು ಪತ್ನಿ, ಮಕ್ಕಳನ್ನು ಬಿಟ್ಟುಹೋದ ಪತಿ
ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ: ಕಲಾವಿದರು, ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ-ಸಿಎಂ ಸಿದ್ದರಾಮಯ್ಯ








