ಬೆಂಗಳೂರು : ಬೆಂಗಳೂರಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಮೂವರು ಹೆಣ್ಣು ಮಕ್ಕಳು ಎಂದು ಪತ್ನಿಗೆ ಪತಿ ಕೈಕೊಟ್ಟ ಘಟನೆ ವರದಿಯಾಗಿದೆ. ಪತ್ನಿ ಹಾಗು ಮೂವರು ಹೆಣ್ಣು ಮಕ್ಕಳನ್ನು ಪತಿ ಬಿಟ್ಟು ಹೋಗಿದ್ದಾನೆ. ಬೆಂಗಳೂರಿನ ಯಲಹಂಕದಲ್ಲಿ ಈ ಒಂದು ಘಟನೆ ನಡೆದಿದೆ.
ಪತಿ ಹರೀಶ್ ಹಾಗೂ ಪತ್ನಿ ವರಲಕ್ಷ್ಮಿ ಲವ್ ಕಮ್ ಅರೇಂಜ್ ಮ್ಯಾರೇಜ್ ಆಗಿದ್ದರು. ಈಗಾಗಲೇ ಇಬ್ಬರು ಹೆಣ್ಣು ಮಕ್ಕಳು ಆಗಿದ್ದು ಇದೀಗ ಒಂದುವರೆ ತಿಂಗಳ ಹಸುಗೂಸನ್ನು ಪತಿ ಹರೀಶ್ ಇದೀಗ ಬಿಟ್ಟು ಹೋಗಿದ್ದಾನೆ. ಖಾಸಗಿ ಆಸ್ಪತ್ರೆಯಲ್ಲಿ ವರಲಕ್ಷ್ಮಿ ನರ್ಸ್ ಆಗಿದ್ದು, ಇನ್ನು ಪತಿ ಹರೀಶ್ ಸೇಲ್ಸ್ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ. ಬೇರೊಬ್ಬ ಮಹಿಳೆಯ ಜೊತೆ ಹರಿದು ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ವರಲಕ್ಷ್ಮಿ ಆರೋಪಿಸಿದ್ದಾರೆ.
ಪತಿ ಹರೀಶ್ ಗೆ ಮೂವರು ಹೆಣ್ಣು ಮಕ್ಕಳನ್ನು ಸಾಕೋದಕ್ಕೆ ಆಗುತ್ತಿಲ್ಲ ಮಕ್ಕಳ ಪೋಷಣೆ ಕಷ್ಟ ಆಗುತ್ತಿದೆ ಎಂದು ವರಲಕ್ಷ್ಮಿ ಕಣ್ಣೀರು ಹಾಕುತ್ತಿದ್ದಾರೆ. ಈ ವಿಚಾರವಾಗಿ ತಿಂಗಳ ಹಿಂದೆ ಬೆಂಗಳೂರಿನ ಈಶಾನ್ಯ ಠಾಣೆಗೆ ದೂರು ನೀಡಿದ್ದು, ಪೊಲೀಸರು ಆತನನ್ನು ಕರೆಸಿಲ್ಲ ಎಂದು ವರಲಕ್ಷ್ಮಿ ಆರೋಪಿಸಿದ್ದಾರೆ.








