ಮಂಡ್ಯ : ಮಂಡ್ಯ ಜಿಲ್ಲೆಯ ಅಗಸರ ಹಳ್ಳಿ ಬಳಿ,ಉಚಿತವಾಗಿ ಎಣ್ಣೆ ಕೊಡದಿದ್ದಕ್ಕೆ ಪುಂಡರು ಬಾರ್ ಗೆ ಬೆಂಕಿ ಇಟ್ಟಿರುವ ಘಟನೆ ವರದಿಯಾಗಿದೆ. ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ಅಗಸರಹಳ್ಳಿ ಗ್ರಾಮದಲ್ಲಿ ಪರಮೇಶ್ ಎಂಬವರಿಗೆ ಸೇರಿದ ಈಗಲ್ ಬಾರ್ ಮತ್ತು ರೆಸ್ಟೋರೆಂಟ್ ಗೆ ಪುಂಡರು ಬೆಂಕಿ ಇಟ್ಟಿದ್ದಾರೆ.
ಮುರುಕನಹಳ್ಳಿಯ ರಕ್ಷಿತ ಹಾಗೂ ಆತನ ಸ್ನೇಹಿತರಿಂದ ಬಾರ್ ನಲ್ಲಿ ಗಲಾಟೆ ಮಾಡಿದ್ದಾರೆ. ಉಚಿತವಾಗಿ ಮದ್ಯ ಕೊಡಬೇಕು ಎಂದು ರಕ್ಷಿತ್ ಮತ್ತು ಆತನ ಸ್ನೇಹಿತರು ಬೇಡಿಕೆ ಇಟ್ಟಿದ್ದರು. ಈ ವೇಳೆ ಮದ್ಯ ಕೊಡದಿದ್ದಕ್ಕೆ ಗಲಾಟೆ ಮಾಡಿದ್ದಾರೆ. ಬಳಿಕ ಬಾರ್ ಹಾಗೂ ಮಾಲೀಕ ಪರಮೇಶ್ ಕಾರಿಗೆ ಬೆಂಕಿ ಹಾಕಿ ಗಲಾಟೆ ಮಾಡಿದ್ದಾರೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೆಆರ್ ಪೇಟೆ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








