ಬೆಂಗಳೂರು : ಇವಿಎಂ ಬಗ್ಗೆ ಮಾಡಿದ ಸಮೀಕ್ಷೆ ವರದಿ ವೆಬ್ಸೈಟ್ ನಿಂದ ಡಿಲೀಟ್ ಮಾಡಲಾಗಿದೆ. ಮತಗಳ್ಳತನ ಆರೋಪ ಸುಳ್ಳು ಎಂದು ಪರೋಕ್ಷ ವರದಿ ನೀಡಿದ ಸಂಸ್ಥೆಯು ಇದೀಗ ಬ್ಯಾಕ್ ಫೈರ್ ಆಗುತ್ತಿದ್ದಂತೆ ವೆಬ್ಸೈಟ್ ನಿಂದ ವರದಿಯನ್ನು ಇದೀಗ ಸಂಸ್ಥೆ ಡಿಲೀಟ್ ಮಾಡಿದೆ.
ಇವಿಎಂ ಸಮೀಕ್ಷೆ ಈಗ ರಾಜಕೀಯ ಸಮರಕ್ಕೆ ನಾಂದಿ ಹಾಡಿತ್ತು. ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಈ ಒಂದು ಸರ್ವೇ ನಡೆಸಲಾಗಿತ್ತು. ಇವಿಎಂ ಮೇಲೆ ನಂಬಿಕೆ ಇದೆ ಎಂದು 83.61% ಜನ ಅಭಿಪ್ರಾಯ ವ್ಯಕ್ತಪಡಿಸಿದ್ದರು. ವರದಿ ಹೊರಬಿದ್ದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಈಗ ಆ ವರದಿಯನ್ನೇ ವೆಬ್ಸೈಟ್ ನಿಂದ ಸರ್ಕಾರ ತೆಗೆದುಹಾಕಿದೆ.
ಕರ್ನಾಟಕ ಮೌಲ್ಯಮಾಪನ ಪ್ರಾಧಿಕಾರ (KMEA) ಈ ಒಂದು ಸಮೀಕ್ಷೆ ನಡೆಸಿತ್ತು. ರಾಜ್ಯದ 5100 ಮಂದಿಯನ್ನು ಸಂದರ್ಶಿಸಿ ಸಮೀಕ್ಷೆ ನಡೆಸಿದರು. ಶೇಕಡ 83.61 ರಷ್ಟು ಜನ ಇವಿಎಂ ಕಾರ್ಯವೈಖರಿ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದರು ಓಟ್ ಚೂರಿ ಅಭಿಯಾನಕ್ಕೆ ವಿರುದ್ಧವಾಗಿ ಸಮೀಕ್ಷೆ ವರದಿ ಬಂದಿತ್ತು. ಸಮೀಕ್ಷೆಯಿಂದ ಸಿದ್ದರಾಮಯ್ಯ ಸರ್ಕಾರ ಮುಜುಗರ ಅನುಭವಿಸಿತ್ತು. ಇದೀಗ ಈ ಒಂದು ವರದಿಯನ್ನು ವೆಬ್ಸೈಟ್ ಇಂದ ಡಿಲೀಟ್ ಮಾಡಲಾಗಿದೆ.








