ತುಮಕೂರು : ತುಮಕೂರಲ್ಲಿ ಘೋರ ದುರಂತ ಸಂಭವಿಸಿದ್ದು, ಜೋಳದ ಚಿಗುರು ಸೇವಿಸಿ 50ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ಪೆನ್ನೊಬನಹಳ್ಳಿಯಲ್ಲಿ ನಡೆದಿದೆ. ಗ್ರಾಮದ ಜಂಪಕ್ಕ ಎಂಬುವವರಿಗೆ ಸೇರಿದ್ದ ಸುಮಾರು 50ಕ್ಕೂ ಕುರಿಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ಕುರಿಗಳು ಸಾವನ್ನಪ್ಪಿವೆ. ಇದರಿಂದ ಕುರಿಗಾಹಿ ಕಂಗಾಲಾಗಿದ್ದಾನೆ. ಪ್ರತಿದಿನದಂತೆ ಮೊನ್ನೆ ಮೇವಿಗೆ ಕುರಿಗಳನ್ನು ಕೆರೆದೋಯ್ದಗ ಈ ಘಟನೆ ನಡೆದಿದೆ. ಎಂದಿನಂತೆ 200ಕ್ಕೂ ಹೆಚ್ಚು ಕುರಿಗಳು ಹುಲ್ಲು ಮೆಯುತ್ತಿತ್ತು. ಇದ್ದಕ್ಕಿದಂತೆ 50ಕ್ಕೂ ಹೆಚ್ಚು ಕುರಿಗಳು ಕುಸಿದು ಬಿದ್ದು ಸಾವನ್ನಪ್ಪಿವೆ. ವಿಷಯ ತಿಳಿದು ಸ್ಥಳಕ್ಕೆ ಪಶು ಇಲಾಖೆ ವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.








