ಬೆಳಗಾವಿ : ಬೆಳಗಾವಿಯಲ್ಲಿ ಮೂರು ಮಕ್ಕಳ ತಾಯಿಯ ಜೊತೆ ಅಕ್ರಮ ಸಂಬಂಧ ಹೊಂದಿದ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿರುವ ಘಟನೆ ವರದಿಯಾಗಿದೆ. ಆಂಟಿಯನ್ನು ಮೀಟ್ ಮಾಡಲು ಹೊರಟಿದ್ದ ಲವರ್ಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದ ಬಳಿ ಈ ಒಂದು ಘಟನೆ ನಡೆದಿದೆ.
ಕಳೆದ ನಾಲ್ಕು ವರ್ಷಗಳಿಂದ ಅಕ್ಷಯ್ ಎಂಬಾತ ಆಂಟಿ ಜೊತೆಗೆ ಸಂಪರ್ಕ ಹೊಂದಿದ್ದ. ಮೂರು ಮಕ್ಕಳ ತಾಯಿ ಜೊತೆಗೆ ಅಕ್ಷಯ್ ಅನೈತಿಕ ಸಂಬಂಧ ಹೊಂದಿದ್ದ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ರಾತ್ರಿ ಭೇಟಿಯಾಗಬೇಕು ಬಾ ಎಂದು ಮಹಿಳೆ ಅಕ್ಷಯನನ್ನು ಕರೆದಿದ್ದಾಳೆ. ಈ ವೇಳೆ ಮಹಿಳೆಯನ್ನು ಭೇಟಿ ಮಾಡಲು ಹೊರಟಿದ್ದ ಅಕ್ಷಯನನ್ನು ದಾರಿ ಮಧ್ಯೆಯೇ ತಡೆದು ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ರಾತ್ರಿ ಬೇಟಿ ಆಗಬೇಕು ಬಾ ಎಂದು ಮಹಿಳೆ ಅಕ್ಷಯನನ್ನು ಕರೆದಿದ್ದಾಳೆ ಈ ವೇಳೆ ಅಕ್ಷಯ್ ಮಹಿಳೆಯನ್ನು ಭೇಟಿ ಮಾಡಲು ಹೊರಡುವಾಗ ದಾರಿ ಮಧ್ಯೆ ತಡೆದು ಹಲ್ಲೆ ಮಾಡಿದ್ದಾರೆ. ಅಕ್ಷಯ್ ಕಲ್ಲಟಗಿ ಮೇಲೆ ಮಹಿಳೆಯ ಪತಿ ಹಾಗೂ ಸಹೋದರ ಮರಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ್ದಾರೆ ಹಲ್ಲೆಗೆ ಒಳಗಾದ ಅಕ್ಷಯ್ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








