ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯಲ್ಲಿ ಕೈದಿಗಳು ಸಿಗರೇಟ್ ಮದ್ಯ ಸೇವನೆ ವಿಡಿಯೋ ವೈರಲ್ ಆದ ಬೆನ್ನಲ್ಲೇ ನಾಲ್ವರು ವಿಚಾರಣಾ ಕೈದಿಗಳ ವಿರುದ್ಧ FIR ದಾಖಲಾಗಿದೆ. ಆಕಾಶ್, ರಾಕೇಶ್, ಪ್ರಜ್ವಲ್ ಹಾಗೂ ಮುನಿಕೃಷ್ಣ ವಿರುದ್ಧ FIR ದಾಖಲಾಗಿದೆ. ಜೈಲಿನಲ್ಲಿ ಈ ನಾಲ್ವರು ಇಸ್ಪೀಟ್ ಆಡುತ್ತಾ ಸಿಗರೇಟ್ ಸಿಗುತ್ತಾ? ಮಧ್ಯ ಸೇವಿಸುತ್ತಿರುವ ವಿಡಿಯೋ ವೈರಲ್ ಆಗಿತ್ತು ಈ ಹಿನ್ನೆಲೆ ನಾಲ್ವರ ವಿರುದ್ಧ fir ದಾಖಲಾಗಿದೆ.
ಹೌದು ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ಮದ್ಯ ಸಿಗರೇಟ್ ಹಾಗೂ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ಅಷ್ಟೇ ಅಲ್ಲದೆ ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೈದಿಗಳಿಗೆ ಡ್ರಗ್ಸ್ ಸಿಗರೇಟ್ ಹಾಗೂ ಮದ್ಯ ಪೂರಕ ಆಗುತ್ತಿತ್ತು.ಆದರೆ ಬೆನ್ನಲ್ಲೇ ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲು ಕೂಡ ಇದೀಗ ಕೈದಿಗಳು ಸಿಗರೇಟ್ ಸೇದುತ್ತಾ ಇಸ್ಪೀಟ್ ಆಡುತ್ತಿರುವ ದೃಶ್ಯ ವೈರಲಾಗಿದೆ.
ನಗರದ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿದ್ದು, ಇದೀಗ ಕೈದಿಗಳ ಹೈಫೈ ಜೀವನ ಶೈಲಿಯ ಮತ್ತೊಂದು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಜೈಲು ಎನ್ನುವ ಗಂಭೀರ ಸ್ಥಳ ಕ್ಲಬ್‌ಗಳನ್ನು ಮೀರಿಸುವಂತೆ ಬಿಂದಾಸ್ ಲೈಫ್ ನಡೆಸುತ್ತಿರುವ ದೃಶ್ಯಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವೈರಲ್ ವಿಡಿಯೊದಲ್ಲಿ ಕೈದಿಗಳು ಬ್ರ್ಯಾಂಡೆಡ್ ಎಣ್ಣೆ ಸೇವಿಸುತ್ತಾ, ಸಿಗರೇಟ್ ಸೇದುತ್ತಾ, ಗುಂಪು ಗುಂಪಾಗಿ ಇಸ್ಪೀಟ್ ಆಟದಲ್ಲಿ ತೊಡಗಿರುವುದು ಸ್ಪಷ್ಟವಾಗಿ ಕಾಣುತ್ತದೆ. ಬಿಗಿ ಭದ್ರತೆ ಇರುವ ಜೈಲಿನೊಳಗೆ ನಿಷೇಧಿತ ವಸ್ತುಗಳು ಹೇಗೆ ಸಪ್ಲೈ ಆಗುತ್ತಿವೆ ಎಂಬ ಪ್ರಶ್ನೆ ಇದೀಗ ಗಂಭೀರ ಚರ್ಚೆಗೆ ಕಾರಣವಾಗಿದೆ.
ಇಷ್ಟೊಂದು ಅಕ್ರಮಗಳು ಜೈಲಿನೊಳಗೆ ನಡೆಯುತ್ತಿದ್ದರೂ ಜೈಲ್ ಚೀಫ್ ಸೂಪರಿಂಟೆಂಡೆಂಟ್ ಡಾ. ಅನಿತಾ ಅವರು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಮಂಗಳವಾರವಷ್ಟೇ ಆರ್.ಡಿ. ಪಾಟೀಲ್ ವಿಡಿಯೊ ವೈರಲ್ ಆಗಿದ್ದು, ಜೈಲ್ ಅಧಿಕ್ಷಕಿ ಡಾ. ಅನಿತಾ ವಿರುದ್ಧ 10 ಲಕ್ಷ ಲಂಚ ಆರೋಪವನ್ನು ಆತ ಮಾಡಿದ್ದ. ಅದರ ಬೆನ್ನಲ್ಲೇ ಬುಧವಾರ ಕೈದಿಗಳ ಹೈಫೈ ಲೈಫ್‌ಗೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್ ಆಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.








