ಉಡುಪಿ : ಇತ್ತೀಚಿಗೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು ದೊಡ್ಡ ದೊಡ್ಡ ಉದ್ಯಮಿಗಳು, ಐಟಿ ಕಂಪನಿಯ ಉದ್ಯೋಗಿಗಳೇ ಟಾರ್ಗೆಟ್ ಆಗಿರುತ್ತಿದ್ದರು. ಆದರೆ ಇದೀಗ ಸೈಬರ್ ವಂಚಕರು ರಾಜಕಾರಣಿಗಳನ್ನು ಬಿಡುತ್ತಿಲ್ಲ. ಉಡುಪಿ ಶಾಸಕ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ.
ಹೌದು ಶಾಸಕ ಯಶಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಮಾಡಿದ್ದಾರೆ. ಜನಸಾಮಾನ್ಯರಿಗೆ ಕಾಡುತ್ತಿದ್ದ ಸೈಬರ್ ವಂಚಕರು ಶಾಸಕರ ಖಾತೆಯನ್ನೂ ಬಿಡದೇ ಹ್ಯಾಕ್ ಮಾಡಿದ್ದಾರೆ. ಇಂದು ಸೈಬರ್ ಕ್ರಿಮಿನಲ್ ಗಳು ಉಡುಪಿಯ ಶಾಸಕ ಯಶ್‌ಪಾಲ್ ಸುವರ್ಣ ಅವರ ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿ, ಅವರ ಸಂಪರ್ಕದಲ್ಲಿ ಇರುವ ಆಪ್ತರಿಗೆ ಮೆಸೇಜ್ ಮಾಡಿ, ನಿಮ್ಮಿಂದ ನನಗೆ ಒಂದು ಸಹಾಯವಾಗಬೇಕೆ ಅಂತ ಹಣದ ಅವಶ್ಯಕತೆಯಿದೆ ಎಂದು ಮೆಸೇಜ್ ಮಾಡಿದ್ದಾರೆ.
ಹೀಗೆ ಸಾಕಷ್ಟು ಜನರಿಗೆ ಮೆಸೇಜ್ ಗಳು ಹೋದ ನಂತರ ಶಾಸಕರಿಗೆ ಈ ಬಗ್ಗೆ ಅರಿವಾಗಿದ್ದು, ತಮ್ಮ ವಾಟ್ಸಾಪ್ ಖಾತೆ ಹ್ಯಾಕ್ ಆಗಿರುವ ಬಗ್ಗೆ ತಡವಾಗಿ ಎಚ್ಚೆತ್ತುಕೊಂಡಿದ್ದು ಯಾರೂ ಹಣ ಹಾಕಬೇಡಿ ಎಂದು ಎಚ್ಚರಿಸಿದ್ದಾರೆ. ತಮ್ಮ ಅಕೌಂಟ್ ಹ್ಯಾಕ್ ಆಗಿದ್ದು ಯವಿಟ್ಟು ಹಣ ನೀಡಬೇಡಿ ಎಂದು ವಿನಂತಿಸಿಕೊಂಡಿದ್ದಾರೆ.








