ಬೆಂಗಳೂರು : ಡ್ರಿಂಕ್ ಅಂಡ್ ಡ್ರೈವ್ ತಪಾಸಣೆಯ ವೇಳೆ ಸಂಚಾರಿ ಪೊಲೀಸರಿಗೆ ಅವಾಜ್ ಹಾಕಿರುವ ಘಟನೆ ವರದಿಯಾಗಿದೆ. ಹೌದು ನಾಲ್ವರು ಯುವಕರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ಮಾಡುವ ವೇಳೆ ಪೋಲೀಸರ ಮೇಲೆ ಹಲ್ಲೆ ಮಾಡಿರುವ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾರು ಚಾಲಕನಿಗೆ ಊದಲು ಹೇಳಿದಾಗ ನಿರಾಕರಿಸಿದ ವಿಚಾರಕ್ಕೆ ಪೊಲೀಸರ ನಡುವೆ ಹಾಗೂ ನಾಲ್ವರ ಯುವಕರ ಮಧ್ಯೆ ವಾಗ್ವಾದ ನಡೆದಿದ್ದು, ಕಾರಿನಿಂದ ಕೆಳಗಿಳಿದು ದೇವನಹಳ್ಳಿ ಟ್ರಾಫಿಕ್ ಪೊಲೀಸರ ಮೇಲೆ ದರ್ಪ ತೋರಿದ್ದಾರೆ. ಪೊಲೀಸರನ್ನು ಎಳೆದಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಕರ್ತವ್ಯಕ್ಕೆ ಅಡ್ಡಿ ಸಾರ್ವಜನಿಕವಾಗಿ ಅಪಮಾನ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ fir ದಾಖಲಾಗಿದೆ. ದೇವನಹಳ್ಳಿಯ ಬೈಪಾಸ್ ನಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದೆ.








