ಬೆಂಗಳೂರು : ಸರ್ಕಾರಿ ಶಾಲೆಗಳನ್ನ ಮುಚ್ಚಬೇಡಿ ಎಂಬ ಸಾಹಿತಿ ಬರಗೂರು ರಾಮಚಂದ್ರಪ್ಪ ಮನವಿ ಮಾಡಿದ ವಿಚಾರಕ್ಕೆ ಒಂದೇ ಒಂದು ಮಗು ಇದ್ದರೂ ಸರ್ಕಾರ ಮುಚ್ಚೋದಿಲ್ಲ, ವಿಲೀನವೂ ಮಾಡೋದಿಲ್ಲ ಅಂತ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಪುನರುಚ್ಚಾರ ಮಾಡಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಶಾಲೆಗಳನ್ನು ವಿಲೀನ ಮಾಡೋ ಅಧಿಕಾರ ನಮಗೆ ಇಲ್ಲ. ನಾವು ವೀಲಿನವೂ ಮಾಡೊಲ್ಲ. ಬರಗೂರು ರಾಮಚಂದ್ರಪ್ಪ ಅವರಿಗೂ ಮಾಹಿತಿ ಕೊಡಲಾಗಿದೆ ಎಂದ ತಿಳಿಸಿದರು. ಸ್ವ-ಇಚ್ಚೆಯಿಂದ KPS ಶಾಲೆಗೆ ವಿಲೀನ ಮಾಡ್ತೀವಿ ಅಂದರೆ ನಾನು ಇಲ್ಲ ಅನ್ನೋಕೆ ಅಗೊಲ್ಲ. ನಾನು ಈಗಾಗಲೇ ಹೇಳಿದ್ದೇನೆ. ಒಂದು ಮಗು ಇದ್ದರೂ ಶಾಲೆ ಮುಚ್ಚೋದಿಲ್ಲ. ಟೀಚರ್ ಇರ್ತಾರೆ, ಮಧ್ಯಾಹ್ನದ ಊಟವೂ ಇರುತ್ತದೆ ಎಂದರು.
ಯಾರೇ ಮುಚ್ಚುತ್ತಾರೆ ಅಂತ ಹೇಳಿದರೆ ಅದಕ್ಕೆ ನಾನು ಉತ್ತರ ಕೊಡಲು ಆಗೊಲ್ಲ. ಬರಗೂರು ಅವರಿಗೆ ಹೇಳ್ತೀನಿ. ಬೇರೆ ಅವರ ಮಾತು ಕೇಳಿ ಅವರು ಹೇಳಿಕೆ ಕೊಡಬಾರದು. ಸಿಎಂ ಅವರು ಕೂಡಾ ಮಾತಾಡೋದಾಗಿ ಹೇಳಿದ್ದಾರೆ. KPS ಒಳ್ಳೆಯ ಪ್ರಾಜೆಕ್ಟ್ ನಿಲ್ಲಿಸಲು ಆಗೊಲ್ಲ. ಗುಣಮಟ್ಟದ ಶಿಕ್ಷಣ ಸಿಗಲಿದೆ. ಉತೀರ್ಣ ಅಂಕ ಕಡಿಮೆ ಮಾಡಿರೋದಕ್ಕೆ ಬರಗೂರು ಅವರ ವಿರೋಧ ಇದೆ ಎಂದರು.
ಬೇರೆ ರಾಜ್ಯದಲ್ಲಿ ಏನಿದೆ ಅಂತ ಬರಗೂರು ರಾಮಚಂದ್ರಪ್ಪ ನೋಡಿಕೊಂಡು ಬರಲಿ. ಯಾಕೆ ಬೇರೆ ರಾಜ್ಯದವರಿಗೆ ಕೆಲಸ ಸಿಗುತ್ತದೆ ಅಂತ ತಿಳಿದುಕೊಂಡರೆ ಉತ್ತರ ಸಿಗುತ್ತದೆ. ಉದ್ಯೋಗ ಸಿಗೋದ್ರಲ್ಲೂ ಇದು ಒಳ್ಳೆ ಬೆಳವಣಿಗೆ. ವಿಲೀನ ನಾವು ಮಾಡೊಲ್ಲ. BEO ಹೇಳಿದ್ದರೆ ಅವರನ್ನ ಕರೆದುಕೊಂಡು ಬಂದರೆ ಅವರನ್ನ ಅಮಾನತು ಮಾಡ್ತೀನಿ. ಸರ್ಕಾರ ಹೇಳ್ತಿದೆ ಕ್ಲೋಸ್ ಮಾಡೊಲ್ಲ ಎಂದರು.








