ಬೆಂಗಳೂರು : ಬೆಂಗಳೂರಿನಲ್ಲಿ ಕಿರುತೆರೆ ನಟಿ ನಂದಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಇದೀಗ ನಂದಿನಿ ಉಳಿದುಕೊಂಡಿದ್ದ ಪಿಜಿಯ ಕೊಠಡಿಯಲ್ಲಿ ಒಂದು ಡೈರಿ ಪತ್ತೆಯಾಗಿದೆ. ಅನ್ನು ಕೆಂಗೇರಿ ಠಾಣೆ ಪೊಲೀಸರು ವಶಕ್ಕೆ ಪಡೆದು ಪರಿಶೀಲನೆ ನಡೆಸಿದ್ದಾರೆ. ಡೈರಿಯಲ್ಲಿ ಹಲವು ಅಂಶಗಳನ್ನು ನಂದಿನಿ ಉಲ್ಲೆಖಿಸಿದ್ದಾರೆ.
ನನಗೆ ಸರ್ಕಾರಿ ಕೆಲಸ ಇಷ್ಟ ಇಲ್ಲ ಎಂದು ಡೈರಿಯಲ್ಲಿ ನಂದಿನಿ ಉಲ್ಲೇಖ ಮಾಡಿದ್ದಾರೆ ನನಗೆ ಆಕ್ಟಿಂಗ್ ಇಷ್ಟ ಇದೆ ಮನೆಯಲ್ಲಿ ಯಾರು ನನ್ನ ಮಾತು ಕೇಳುತ್ತಿಲ್ಲ ಆತ್ಮಹತ್ಯೆಗೆ ಮುನ್ನ ನಂದಿನಿ ತನ್ನ ಡೈರಿಯಲ್ಲಿ ಈ ವಿಚಾರವಾಗಿ ಉಲ್ಲೇಖಿಸಿದ್ದಾರೆ. ಕೆಂಗೇರಿ ಪೊಲೀಸರು ಡೈರಿಯನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ. ಮೂಲತಃ ನಂದಿನಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿಯಾಗಿದ್ದರು.
ಬೆಂಗಳೂರಿನ ಕೆಂಗೇರಿಯ ಪಿಜಿಯಲ್ಲಿ ಅವರು ನೆಲೆಸಿದ್ದರು. ಆರ್ ಆರ್ ನಗರದಲ್ಲಿ ಆಕ್ಟಿಂಗ್ ತರಬೇತಿಯನ್ನು ಪಡೆದಿದ್ದರು. ಹೆಸರುಘಟ್ಟದ ಖಾಸಗಿ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಕಾಲೇಜಿಗೆ ಸರಿಯಾಗಿ ಹೋಗದೆ ಆಕ್ಟಿಂಗ್ ಕ್ಲಾಸ್ ಗೆ ಹೋಗುತ್ತಿದ್ದರು. 2019 ರಿಂದ ಕನ್ನಡದ ಹಲವು ಧಾರವಾಹಿಗಳಲ್ಲಿ ಅವರು ಅಭಿನಯಿಸಿದ್ದರು. ಇದೇ ವರ್ಷದ ಅಗಸ್ಟ್ ನಲ್ಲಿ ಕೆಂಗೇರಿ ಬಳಿಯ ಪಿಜಿಗೆ ಸೇರಿದರು. 2023ರಲ್ಲಿ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸದ ಆಫರ್ ಬಂದಿತ್ತು. ಆದರೆ ಆಕ್ಟಿಂಗ್ ಇಷ್ಟ ಅಂತ ಹೇಳಿ ಸರ್ಕಾರಿ ಕೆಲಸವನ್ನು ನಂದಿನಿ ತ್ಯಜಿಸಿದ್ದರು. ಮನೆಯಲ್ಲಿ ಹಠ ಮಾಡಿ ಬೆಂಗಳೂರಿಗೆ ಬಂದಿದ್ದಾರೆ.
ಡಿಸೆಂಬರ್ 28 ರಂದು ಸಂಜೆ ಸ್ನೇಹಿತ ಪುನೀತ್ ಮನೆಗೆ ನಂದಿನಿ ತೆರಳಿದ್ದಾರೆ ರಾತ್ರಿ 11:23ರ ಸುಮಾರಿಗೆ ಪಿಜಿಗೆ ವಾಪಸ್ ಆಗಿದ್ದು ನಂತರ ರೂಮ್ ಲಾಕ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವೇಳೆ ಸ್ನೇಹಿತ ಪುನೀತ್ ನಂದಿನಿ ಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸದೆ ಇದ್ದಾಗ ಪುನೀತ್ ಪಿಜಿ ಮ್ಯಾನೇಜರ್ ಗೆ ಕರೆ ಮಾಡಿದ್ದಾನೆ. ಬಳಿಕ ಪಿಜಿ ಬಳಿ 3ಡಿ ಪರಿಶೀಲನೆ ನಡೆಸಿದಾಗ ನಂದಿನಿ ಆತ್ಮಹತ್ಯೆ ಶರಣಾಗಿರುವುದು ಬೆಳಕಿಗೆ ಬಂದಿದೆ. ಬಿಜಿ ಕಿಟಕಿಗೆ ಮೇಲಿಂದ ನೇಣು ಬಿಗಿದುಕೊಂಡು ನಂದಿನಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಳಿಕ ಪಿಜಿ ಸಿಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.








