ಬಾಗಲಕೋಟೆ : ಕಳೆದ ಕ್ರಿಸ್ಮಸ್ ಹಬ್ಬದಂದು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಬಳಿ ಖಾಸಗಿ ಬಸ್ ಒಂದು ಹೊತ್ತಿ ಉರಿದು ಏಳು ಜನರು ಸಜೀವವಾಗಿ ದಹನಗೊಂಡಿದ್ದರು. ಈ ಘಟನೆ ಮಾಸುವ ಮುನ್ನವೇ ಬಾಗಲಕೋಟೆ: ಬೆಂಗಳೂರಿಂದ ರಾಜಸ್ಥಾನದ ಜೋಧಪುರ್‌ಗೆ ಹೊರಟಿದ್ದ ಖಾಸಗಿ ಬಸ್ಸಿನ ಎಂಜಿನ್‌ನಲ್ಲಿ ಹೊಗೆ ಕಾಣಿಸಿದೆ.
ಇಳಕಲ್ ತಾಲೂಕಿನ ಗೂಡೂರು ಬಳಿ ಬಿಆರ್ ಟ್ರಾವೆಲ್ಸ್ ಬಸ್ ಚಲಿಸುತ್ತಿದ್ದಾಗ ಹೊಗೆ ಕಾಣಿಸಿದೆ. ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಕೂಡಲೇ ಚಾಲಕ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿದ್ದಾನೆ. ಪ್ರಯಾಣಿಕರು ಲಗೇಜ್‌ನೊದಿಗೆ ಇಳಿದಿದ್ದಾರೆ. ಈಗ ಇಳಕಲ್‌ನಿಂದ ಮೆಕ್ಯಾನಿಕ್ ಕರೆಸಿ ರಿಪೇರಿ ಕೆಲಸ ಆರಂಭವಾಗಿದೆ. ರಿಪೇರಿ ಯಶಸ್ವಿಯಾದರೆ ಈ ಬಸ್ಸು ರಾಜಸ್ಥಾನಕ್ಕೆ ತೆರಳಲಿದೆ. ರಿಪೇರಿ ಆಗದೇ ಇದ್ದರೆ ಬೇರೊಂದು ಬಸ್ಸಿನ ಮೂಲಕ ಪ್ರಯಾಣಿಕರನ್ನು ಕಳುಹಿಸಲಾಗುವುದು ಎಂದು ಬಿಆರ್ ಟ್ರಾವೆಲ್ಸ್ ಹೇಳಿದೆ.








