ಬೆಂಗಳೂರು : ಧರ್ಮಸ್ಥಳದ ವಿರುದ್ಧ ಷಡ್ಯಂತರ ಮತ್ತು ಅಪಪ್ರಚಾರ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ SIT ಕೋರ್ಟ್ ಗೆ ಸಲ್ಲಿಸಿದ ವರದಿಯಲ್ಲಿ ಮತ್ತಷ್ಟು ಸ್ಪೋಟಕವಾದ ಅಂಶಗಳು ಬಯಲಾಗಿದೆ. ಜಯಂತ್ ರೈಲಿನಲ್ಲಿ ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದ ಫ್ಲೈಟ್ ನಲ್ಲಿ ಚಿನ್ನಯ್ಯ, ಗಿರೀಶ್ ಮಟಣ್ಣನವರ್ ಹಾಗು ಸುಜಾತ ಭಟ್ ತೆರಳಿದ್ದಾರೆ ಎಂದು ಕೋರ್ಟಿಗೆ ಸಲ್ಲಿಸಿದ ಪ್ರಾಥಮಿಕ ವರದಿಯಲ್ಲಿ ಉಲ್ಲೇಖವಾಗಿದೆ..
ದೆಹಲಿಯಲ್ಲಿ ರಾತ್ರಿ ಮಲಗಿದ್ದಾಗ ಜಯಂತ್ ಗೆ ಕೆಟ್ಟ ಕನಸು ಬಿದ್ದಿತ್ತು. ಒಂದೇ ರೂಮ್ನಲ್ಲಿ ಚಿನ್ನಯ, ಮಟ್ಟಣ್ಣನವರ್ ಮತ್ತು ಜಯಂತ್ ಮಲಗಿದ್ದಾರೆ. ಕೆಟ್ಟ ಕನಸು ಬಿದ್ದು ಜಯಂತ್ ಕಿರುಚಿಕೊಂಡಿದ್ದಾನೆ. ಹಾಗಾಗಿ ಬುರುಡೆ ತರಲು ಒಪ್ಪದೇ ಆತ ಹೆದರಿ ವಾಪಸ್ ಆಗಿದ್ದಾನೆ. ದೆಹಲಿಯಲ್ಲಿಯೇ ಬುರುಡೆಯನ್ನು ಬಿಟ್ಟು ಬೆಂಗಳೂರಿಗೆ ಜಯಂತ ವಾಪಸ್ ಆಗಿದ್ದಾನೆ.
ಬೆಂಗಳೂರಿಗೆ ಜಯಂತ್ ಗಿರೀಶ ಮಟ್ಟಣ್ಣನವರ್ ಹಾಗೂ ಸುಜಾತ ಭಟ್ ವಾಪಸ್ ಆಗಿದ್ದಾರೆ. ಮತ್ತೆ ವಿಮಾನದ ಮೂಲಕ ತೆರಳಿದ್ದಾನೆ. ನಂತರ ರೈಲಿನ ಮೂಲಕ ಬುರುಡೆಯನ್ನು ತಂದಿದ್ದಾನೆ. ದೆಹಲಿಯಿಂದ ನೇರವಾಗಿ ಜಯಂತ್ ಮಂಗಳೂರಿಗೆ ಬಂದಿದ್ದಾನೆ. ಬಳಿಕ ಮಹೇಶ ಶೆಟ್ಟಿ ತಿಮರೋಡಿ ಮನೆಗೆ ಬುರುಡೆ ತೆಗೆದುಕೊಂಡು ಹೋಗಿದ್ದಾನೆ. ಎಂದು SIT ಅಧಿಕಾರಿಗಳು ವರದಿಯಲ್ಲಿ ಜಯಂತ ಹೇಳಿಕೆಯನ್ನು ದಾಖಲಿಸಿದ್ದಾರೆ.








