ಬೆಂಗಳೂರು : ಬೆಂಗಳೂರಿನಲ್ಲಿ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರಿನ ಕತ್ರಿಗುಪ್ಪೆಯಲ್ಲಿ ಈ ಒಂದು ಘಟನೆ ನಡೆದಿದೆ ಐದಾರು ಪುಡಿ ರೌಡಿಗಳು ಕಾರಿನ ಮೇಲೆ ದಾಳಿ ಮಾಡಿದ್ದಾರೆ. ಕಾರಿನ ಒಳಗೆ ಇದ್ದಂತಹ ಇಬ್ಬರು ಯುವಕರ ಮೇಲೆ ಪುಡಿ ರೌಡಿಗಳು ದಾಳಿ ಮಾಡಲು ಯತ್ನಿಸಿದ್ದಾರೆ.
ಕಾರಿನೊಳಗಿದ್ದ ಯುವಕರಿಬ್ಬರು ಅದೃಷ್ಟವಶಾತ್ ಗ್ರೇಟ್ ಎಸ್ಕೇಪ್ ಆಗಿದ್ದಾರೆ. ಸಿಸಿಟಿವಿಯಲ್ಲಿ ದಾಳಿಯ ದೃಶ್ಯ ಲೈವ್ ಸೆರೆಯಾಗಿದೆ. ಬಶೀರ್ ಎಂಬಾತನ ಮನೆಗೆ ನುಗ್ಗಿ ಈ ಒಂದು ಗ್ಯಾಂಗ್ ಹಲ್ಲೆ ಮಾಡಿದೆ. ಅಲ್ಲದೇ ಪಾನ್ ಶಾಪ್ ಗೆ ನುಗ್ಗಿ ಬಾಟಲ್ ಗಳನ್ನು ಪುದಿಗಟ್ಟಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿನ್ನೆ ರಾತ್ರಿ 9 ಗಂಟೆಗೆ ಈ ಒಂದು ಘಟನೆ ನಡೆದಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ








