ಶಿವಮೊಗ್ಗ: ಜಿಲ್ಲೆಯ ಸಾಗರದ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆಗೆ ಹೈಕೋರ್ಟ್ ತಡೆ, ತೆರವಿನ ಬಳಿಕ, ಇದೀಗ ಮತ್ತೆ ಮರು ನಿಗದಿ ಮಾಡಲಾಗಿದೆ. ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಚುನಾವಣೆಗೆ ದಿನಾಂಕ ಫಿಕ್ಸ್ ಮಾಡಲಾಗಿದೆ.
ಈ ಕುರಿತಂತೆ ಚುನಾವಣಾಧಿಕಾರಿ ನಾಗಭೂಷಣ ಚಂದ್ರಶೇಖರ ಕಲ್ಮನೆ ಅವರು ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನಕ್ಕೆ ಮುಂದುವರೆದ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದಾರೆ.
ಹೀಗಿದೆ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ಚುನಾವಣಾ ವೇಳಾಪಟ್ಟಿ
- ದಿನಾಂಕ 26-02-2026ರಂದು ಗುರುವಾರ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ನಾಮಪತ್ರ ಸ್ವೀಕಾರಕ್ಕೆ ಕೊನೆ ದಿನ
- ದಿನಾಂಕ 27-02-2026ರಂದು ನಾಮಪತ್ರ ಪರಿಶೀಲನೆ
- ದಿನಾಂಕ 27-02-2026ರಂದು ನಾಮಪತ್ರ ಪರಿಶೀಲನೆ ಬಳಿಕ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 28-02-2026ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನ
- ದಿನಾಂಕ 28-02-2026ರಂದು ಸಂಜೆ 4 ಗಂಟೆಗೆ ಚಿಹ್ನೆ ಹಂಚಿಕೆ
- ದಿನಾಂಕ 2-03-2026ರಂದು ಸಂಜೆ 4 ಗಂಟೆಗೆ ಚಿಹ್ನೆ ಸಹಿತ ಕ್ರಮಬದ್ಧವಾಗಿ ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳ ಪಟ್ಟಿ ಪ್ರಕಟ
- ದಿನಾಂಕ 08-03-2026ರಂದು ಸಾಗರದ ವಿನೋಬ ನಗರದಲ್ಲಿರುವಂತ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ.
- ದಿನಾಂಕ 8-03-2026ರಂದು ಮತದಾನದ ನಂತ್ರ ಮತಏಣಿಕೆ, ಫಲಿತಾಂಶ ಪ್ರಕಟ
ಅಂದಹಾಗೇ ಹೈಕೋರ್ಟ್ ಚುನಾವಣೆಗೆ ನೀಡಿದ್ದಂತ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು. ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ಆದೇಶದಂತೆ ಚುನಾವಣೆ ನಡೆಸೋದಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಆದರೇ ಆದೇಶದ ಬಳಿಕ ಒಂದು ತಿಂಗಳ ಒಳಗಾಗಿ ಚುನಾವಣೆ ನಡೆಸಬೇಕಿದ್ದಂತ ಚುನಾವಣಾಧಿಕಾರಿಗಳು, ಕೋರ್ಟ್ ಆದೇಶ ಉಲ್ಲಂಘನೆ ಎನ್ನುವಂತೆ ಮುಂದುವರಿಕೆ ಚುನಾವಣಾ ಅಧಿಸೂಚನೆ ಹೊರಡಿಸಿದ್ದಾರೆ. ಮಾರಿಕಾಂಬ ದೇವಿಯ ಜಾತ್ರೆ ಮುಕ್ತಾಯದ ಬಳಿಕ ಚುನಾವಣೆ ನಿಗದಿ ಪಡಿಸಿರೋದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಜೊತೆ ಜೊತೆಗೆ ಹಾಲಿ ಸಮಿತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಇಂತಹ ಚುನಾವಣಾ ವೇಳಾಪಟ್ಟಿ ನಿಗದಿ ಪಡಿಸಿದ್ದಾರೆ ಎನ್ನಲಾಗುತ್ತಿದೆ.
ವರದಿ; ವಸಂತ ಬಿ ಈಶ್ವರಗೆರೆ…, ಸಂಪಾದಕರು..

ಸಾಗರದಲ್ಲಿ ‘ನಕಲಿ ಕಾರ್ಮಿಕರ ಕಾರ್ಡ್’ ಮಾಡುತ್ತಿರೋರಿಗೆ ಈ ಎಚ್ಚರಿಕೆ ಕೊಟ್ಟ ‘ಶಾಸಕ ಗೋಪಾಲಕೃಷ್ಣ ಬೇಳೂರು’
ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ತಮ್ಮ ಜಮೀನು ನೀಡಲು ’25 ತಳಕಳಲೆ ಗ್ರಾಮಸ್ಥರು’ ಒಪ್ಪಿಗೆ, ಶಾಸಕರಿಗೆ ಪತ್ರ
ಚಿತ್ರದುರ್ಗ ಬಸ್ ದುರಂತ ಪ್ರಕರಣ: DNA ಪರೀಕ್ಷೆ ವರದಿ ಆಧರಿಸಿ ಐವರ ಮೃತದೇಹ ಕುಟುಂಬಸ್ಥರಿಗೆ ಹಸ್ತಾಂತರ








