ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕ, ಮಾಡಬಾರದು ಎಂಬುದು ಪರಿಸರ ವಾದಿಗಳು, ರೈತರ ಒತ್ತಾಯವಾಗಿದೆ. ಇದರ ನಡುವೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರಿಗೆ 25 ತಲಕಳಲೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ.
ಈ ಕುರಿತಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ತಳಕಳಲೆ ಗ್ರಾಮಸ್ಥರು ಪತ್ರ ಬರೆದಿದ್ದು, ಅದರಲ್ಲಿ ನಾವು ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ತಳಕಳಲೆ ಗ್ರಾಮದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ ಕೃಷಿ ಜಮೀನು ಹೊಂದಿದ್ದೇವೆ. ಸರ್ಕಾರದಿಂದ ಮಂಜೂರಾತಿ ಪಡೆದು ಕಂದಾಯ ಜಮೀನು ಹೊಂದಿರುತ್ತೇವೆ. ಸರ್ಕಾರದ ಮಹತ್ತರವಾದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯು ಸುಗಮವಾಗಿ ಕಾರ್ಯಗತವಾಗಲು ಅನುಕೂಲವಾಗುವಂತೆ ನಾವುಗಳು ನಮ್ಮ ಕೃಷಿ ಜಮೀನನ್ನು ಸರ್ಕಾರಕ್ಕೆ ಷರತ್ತುಬದ್ಧವಾಗಿ ನೀಡಲು ಚಿಂತನೆ ಮಾಡಿರುತ್ತೇವೆ ಎಂದಿದ್ದಾರೆ.
ನಾವು ಸುಮಾರು 25 ಕೃಷಿ ಕುಟುಂಬದವರು ಹೊಂದಿರುವ ಕೃಷಿ ಜಮೀನನ್ನು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ಸುರಂಗ ಮಾರ್ಗದಲ್ಲಿ ಹೊರತೆರೆಯುವ ಸುಮಾರು 18 ಸಾವಿರ ಟನ್ ಕಚ್ಚಾ ವಸ್ತುಗಳನ್ನು ಸಂಗ್ರಹದ ಡಂಪ್ ಯಾರ್ಡ್, ಸ್ಕ್ರಕ್ಟರ್ ನಿರ್ಮಾಣ, ವಸತಿ ಸಮುಚ್ಛಯಗಳ ನಿರ್ಮಾಣಕ್ಕೆ ಪೂರಕವಾಗುವಂತೆ ಬಳಸಿಕೊಳ್ಳಲು ನಮ್ಮ ಜಮೀನಿನ ಪ್ರದೇಶ ಅತ್ಯಂತ ಉಪಯುಕ್ತವಾಗಿರುತ್ತದೆ ಎಂದಿದ್ದಾರೆ.
ಒಮ್ಮೆ ನಮ್ಮಗಳ ಜಮೀನು ಯೋಜನೆಗೆ ಪೂರಕವಾಗಿ ಅಗತ್ಯವಿದ್ದಲ್ಲಿ ನಾವುಗಳು ಸಂತ್ರಸ್ತ ಕುಟುಂಬದವರು ಪಡೆಯುವ ಮಾದರಿಯ ಪರಿಹಾರ ಮತ್ತು ಉದ್ಯೋಗಾವಕಾಶಗಳನ್ನು ಪಡೆದು ನಮ್ಮ ಜಮೀನುಗಳನ್ನು ಯೋಜನೆಗೆ ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂದು 25 ಕುಟುಂಬಸ್ಥರು ಸಹಿ ಮಾಡಿ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ಪತ್ರ ಬರೆದು ತಿಳಿಸಿದ್ದಾರೆ.
ತಳಕಳಲೆ ಗ್ರಾಮಸ್ಥರು ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನಗೆ ತಮ್ಮ ಜಮೀನು ಬಿಟ್ಟುಕೊಡಲು ಒಪ್ಪಿ ತಮಗೆ ನೀಡಿರುವಂತ ಪತ್ರವನ್ನು, ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ಸೂಕ್ತ ಪರಿಹಾರದೊಂದಿಗೆ ಕ್ರಮ ವಹಿಸೋದಕ್ಕೆ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಈ ಮೂಲಕ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ 25 ರೈತ ಕುಟುಂಬಗಳು ತಮ್ಮ ಜಮೀನು ಬಿಟ್ಟುಕೊಡೋದಕ್ಕೆ ಮುಂದಾಗಿರೋದು ಖಚಿತಗೊಂಡಿದೆ.
ವರದಿ: ವಸಂತ ಬಿ ಈಶ್ವರಗೆರೆ…, ಸಂಪಾದಕರು…

ಸಾಗರದಲ್ಲಿ ‘ನಕಲಿ ಕಾರ್ಮಿಕರ ಕಾರ್ಡ್’ ಮಾಡುತ್ತಿರೋರಿಗೆ ಈ ಎಚ್ಚರಿಕೆ ಕೊಟ್ಟ ‘ಶಾಸಕ ಗೋಪಾಲಕೃಷ್ಣ ಬೇಳೂರು’








