ಬೆಂಗಳೂರು : ಮನರೆಗ ಯೋಜನೆ ಹೆಸರು ಬದಲಿಸಿದ್ದಕ್ಕೆ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ವಿರುದ್ಧ ಇದೀಗ ಕಿಡಿ ಕಾರಿದ್ದಾರೆ. ಬಿಜೆಪಿ ಅವರಿಗೆ ಕೇಡುಗಾಲ ಬಂದಿದೆ. ಬಿಜೆಪಿಯವರಿಗೆ ಗಾಂಧೀಜಿ ನೆಹರು ರಾಜೀವ್ ಗಾಂಧಿ ಕಂಡರೆ ಆಗಲ್ಲ ನನ್ನನ್ನು ಸಹ ಕಂಡರೂ ಆಗುವುದಿಲ್ಲ ಆದರೆ ಅವರು ನನಗೆ ಏನು ಮಾಡಲು ಸಾಧ್ಯವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಧಿಕಾರ ಬರುತ್ತೆ ಹೋಗುತ್ತೆ. ಆದರೆ ಗಾಂಧೀಜಿ ಹೆಸರು ಶಾಶ್ವತ ನಮ್ಮ ಕಾಂಗ್ರೆಸ್ ಫೌಂಡೇಶನ್ ಗಟ್ಟಿಯಾಗಿದೆ. ಬಿಜೆಪಿಯವರು ವೋಟ್ ಚೋರಿ ಕೆಲಸವನ್ನು ಮಾಡುತ್ತಾರೆ. ಬಿಜೆಪಿಯವರು ಯಾವ ಮಟ್ಟಕ್ಕೆ ಬೇಕಾದರೂ ಹೋಗುತ್ತಾರೆ. ನಿತೀಶ್ ಚಂದ್ರಬಾಬು ನಾಯ್ಡು ಇಲ್ಲದಿದ್ದರೆ ಹೋಗಿ ಬಿಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಕಿಡಿ ಕಾರ್ಯಕರ್ತರು.
ಗಾಂಧೀಜಿಯನ್ನು ಕೊಂದ ಮೇಲು ಇವರ ದ್ವೇಷ ಕಡಿಮೆ ಆಗಿಲ್ಲ. ಮಹಾತ್ಮ ಗಾಂಧೀಜಿ ಅವರನ್ನು ಕಂಡರೆ ಬಿಜೆಪಿ ಅವರಿಗೆ ಆಗಲ್ಲ. ಹೀಗಾಗಿ ಮನರೇಗಾ ಹೆಸರನ್ನು ಬದಲಾಯಿಸಿದರು. ಬಿಜೆಪಿಯವರಿಗೆ ನೆಹರು ಹಾಗೂ ರಾಜೀವ್ ಗಾಂಧಿ ಅವರನ್ನು ಕಂಡರೂ ಆಗಲ್ಲ ನನ್ನ ಕಂಡರೂ ಬಿಜೆಪಿಗೆ ಆಗಲ್ಲ ಆದರೆ ಅವರು ನನಗೇನು ಮಾಡಲ್ಲ. ಮನರೇಗಾ ಯೋಜನೆಗೆ ವಿಬಿಜಿ ರಾಮ್ ಜಿ ಅಂತ ಮರುನಾಮಕರಣ ಮಾಡಿದ್ದಾರೆ.
ಈ ರಾಮ ಇದೆಯಲ್ಲ ದಶರಥರಾಮ ಅಲ್ಲ. ಬಿಜೆಪಿಯ ರಾಮ ರಾಜ ಭವನ ಹೆಸರು ಕೂಡ ಬಿಜೆಪಿಯವರು ಬದಲಾಯಿಸಿದ್ದಾರೆ. ನಾವು ಕ್ಯಾಬಿನೆಟ್ ನಲ್ಲಿ ಒಪ್ಪಿದಿವಾ ಇಲ್ವಲ್ಲ? ಯೋಜನಾ ಆಯೋಗದ ಹೆಸರನ್ನು ಕೂಡ ಬದಲಾಯಿಸಿದ್ದಾರೆ ಬಿಜೆಪಿ ಅವರಿಗೆ ನೀತಿಯೇ ಇಲ್ಲ ಪ್ರಧಾನಿ ಆಯೋಗ ಅದು ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.








