ಮೈಸೂರು : ಡಿಸಿಎಂ ಡಿಕೆ ಶಿವಕುಮಾರ್ CM ಆಗೋ ವಿಚಾರವಾಗಿ, ಅಂತೂ ಇಂತೂ ಕುಂತಿ ಮಕ್ಕಳಿಗೆ ಅಧಿಕಾರ ಇಲ್ಲ ಅಂತಾಗಿದೆ ಎಂದು ಮೈಸೂರಿನಲ್ಲಿ ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ವ್ಯಂಗ್ಯವಾಡಿದರು.
ಮೈಸೂರಲ್ಲಿ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದಾರೆ. ಸಾಕಷ್ಟು ಹಣ ಖರ್ಚು ಮಾಡಿದ್ದಾರೆ. ಈ ಹಿಂದೆ ಪತ್ರ ಬರೆದಿದ್ದೆ, ಈಗ ಬರೆದ್ರೆ ಓಡುವವರು ಯಾರಿದ್ದಾರೆ? ಪತ್ರ ಓದುವುದಕ್ಕೆ ರಾಹುಲ್ ಗಾಂಧಿಗೆ ಪುರುಸೊತ್ತು ಎಲ್ಲಿದೆ? ಸಿಎಂ ಸಿದ್ದರಾಮಯ್ಯ ಪತ್ರ ಓದುವುದಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕೇಳಿದರೆ ಅವರು ಹೈಕಮಾಂಡ್ ಅವರನ್ನು ಕೇಳಿದ್ದಾರೆ ನಾನೇ ಹೈಕಮಾಂಡ್ ಅಂತ ಹೇಳಿಕೊಳ್ಳುವ ಧೈರ್ಯ ಸಹ ಇಲ್ಲ ಎಂದು ತಿಳಿಸಿದರು.








