ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಕೊನೆಗೂ ಚಿರತೆ ಬಿದ್ದಿದೆ. ಚಿಕ್ಕಮಂಗಳೂರು ಜಿಲ್ಲೆಯ ಕಡೂರು ತಾಲೂಕಿನ ರಂಗೇನಹಳ್ಳಿಯಲ್ಲಿ ಅರಣ್ಯ ಇಲಾಖೆ ಇಟ್ಟಂತಹ ಬೋನಿಗೆ ಚಿರತೆ ಕೊನೆಗೂ ಬಿದ್ದಿದೆ.
ಎಮ್ಮೆದೊಡ್ಡಿ, ರಂಗೇನಹಳ್ಳಿ, ಶ್ರೀರಾಮಪುರ, ಗೊಲ್ಲರಹಟ್ಟಿ, ಶಿವಪುರ, ಲಕ್ಕೇನಹಳ್ಳಿ, ಇಸ್ಲಾಂಪುರ ಭಾಗದಲ್ಲಿ ಚಿರತೆ ಓಡಾಡುತ್ತಿತ್ತು. ಇದರಿಂದ ಈ ಭಾಗದ ಜನರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿತ್ತು. ಜಾನುವಾರು ಸಾಕು ನಾಯಿಗಳನ್ನು ಚಿರತೆ ಹೊತ್ತು ಒಯ್ದಿತ್ತು. ಹಾಗಾಗಿ ಸ್ಥಳೀಯರು ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿಗಳು ಇರಿಸಿದ್ದ ಬೋನಿಗೆ ಚಿರತೆ ಬಿದ್ದಿದ್ದು ಈ ಭಾಗದ ಜನ ನಿಟ್ಟುಸಿರುಬಿಟ್ಟಿದ್ದಾರೆ








