ಮಂಡ್ಯ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರ, ದೌರ್ಜನ್ಯ ಖಂಡಿಸಿ ಹಿಂದೂ ಪರ ಸಂಘಟನೆಗಳು ಮದ್ದೂರು ನಗರದಲ್ಲಿ ಶನಿವಾರ ಸಂಜೆ ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಮದ್ದೂರು ನಗರದ ಶ್ರೀ ಉಗ್ರ ನರಸಿಂಹ ಸ್ವಾಮಿ ದೇವಾಲಯದಿಂದ ಪ್ರವಾಸಿ ಮಂದಿರದ ವೃತ್ತದವರೆಗೆ ಹಿಂದೂ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸಿ ವಂದೇ ಮಾತರಂ ಹಾಗೂ ನಾವೆಲ್ಲ ಒಂದು ನಾವೆಲ್ಲ ಹಿಂದೂ ಎಂಬ ಘೋಷಣೆಗಳನ್ನು ಕೂಗಿ ಬಾಂಗ್ಲಾದೇಶದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಹಿಂದೂ ಮುಖಂಡ ಕೆ.ಟಿ.ನವೀನ್ ಮಾತನಾಡಿ, ಬಾಂಗ್ಲಾದೇಶದಲ್ಲಿ ಇತ್ತಿಚೆಗೆ ಹತ್ಯೆಗೀಡಾದ ದೀಪು ಚಂದ್ರ ದಾಸ್ ಎಂಬ ಹಿಂದೂ ಯುವಕನನ್ನು ಬಹಿರಂಗವಾಗಿ ಸುಟ್ಟು ಹಾಕಿರುವ ಕೃತ್ಯವು ಅಮಾನವೀಯ ಮತ್ತು ಧರ್ಮದ ಹೆಸರಿನಲ್ಲಿ ಮಾನವೀಯತೆಯ ವಿರುದ್ಧ ನಡೆದ ಅಪರಾಧವಾಗಿದ್ದು, ಅವರ ಸಾವಿಗೆ ನ್ಯಾಯ ಸಿಗಬೇಕೆಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಬಿಜೆಪಿ ಅಧ್ಯಕ್ಷ ಶಿವದಾಸ್ ಸತೀಶ್, ಎಂ.ಸಿ.ಸಿದ್ದು, ರವಿಕುಮಾರ್, ಕದಲೂರು ಸುರೇಶ್, ಮಧುಕುಮಾರ್, ಮಲ್ಲಿಕಾರ್ಜುನ, ಅಭಿಷೇಕ್, ಪಂಚಮಿ ಗುರು, ಗಿರೀಶ್ ಮತ್ತಿತರರು ಇದ್ದರು.
ವರದಿ : ಗಿರೀಶ್ ರಾಜ್, ಮಂಡ್ಯ
ಇದು ‘ಗಾಯತ್ರಿ ಮಂತ್ರ’ದ ಮಹತ್ವ: ಪಠಿಸಿ ನೋಡಿ, ಎಲ್ಲಾ ಕಷ್ಟಗಳು ನಿವಾರಣೆ ಗ್ಯಾರಂಟಿ
KSDL, ಕೃಷಿ ಇಲಾಖೆಯ ವಿವಿಧ ಹುದ್ದೆಗಳ ನೇಮಕಾತಿ: ಜನವರಿ.10, 12 ಬದಲಿಗೆ ಜ.18ಕ್ಕೆ ನೇಮಕಾತಿ ಪರೀಕ್ಷೆ








