ಬೆಂಗಳೂರು : ರಾಜ್ಯದಲ್ಲಿ ಅಧಿಕಾರ ಗದ್ದುಗೆಯ ಕಿತ್ತಾಟದ ನಡುವೆ, ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಕುರಿತು ಕೋಡಿಮಠದ ಶ್ರೀಗಳು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಇದರ ಮಧ್ಯ ವೇದಿಕೆ ಮೇಲೇನೆ ಡಿಕೆ ಶಿವಕುಮಾರ್ ಗೆ ಮಹಿಳೆಯೊಬ್ಬರು ಯಾವಾಗ CM ಆಗ್ತೀರಾ ಸರ್ ಅಂತ ಪ್ರಶ್ನೆ ಕೇಳಿದ್ದಾರೆ.
ಹೌದು ಬೆಂಗಳೂರಿನ ಬಸವನಗುಡಿ ಅವರೇ ಬೆಳೆ ಮೇಳದಲ್ಲಿ ಈ ಒಂದು ಘಟನೆ ನಡೆದಿದ್ದು, ಡಿಸಿಎಂ ಡಿಕೆ ಶಿವಕುಮಾರ್ ಭಾಷಣ ಮುಗಿಸಿ ಹೊರಡುವಾಗ ಮಹಿಳೆ ಪ್ರಶ್ನೆ ಮಾಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಸರ್ ಯಾವಾಗ ನೀವು ಸಿಎಂ ಆಗ್ತೀರ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಮಹಿಳೆ ಮಾತು ಕೇಳಿಸಿಕೊಂಡು ಡಿಕೆ ಶಿವಕುಮಾರ್ ಏನು ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ.
ಇನ್ನು ಬೆಳಗಾವಿಯಲ್ಲಿ ಕೋಡಿಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು,ಸ್ಪೋಟಕ ಭವಿಷ್ಯ ನುಡಿದಿದ್ದರೆ. ಹಾಲು ಮತದ ಸಮಾಜದವರಿಂದ ಅಧಿಕಾರ ಕಿತ್ತುಕೊಳ್ಳೋದು ಅಷ್ಟು ಸುಲಭವಾದುದ್ದಲ್ಲ. ಅದು ಕಷ್ಟವಾಗಿದೆ. ಸಿದ್ಧರಾಮಯ್ಯ ಅವರು ತಾವಾಗಿಯೇ ಅಧಿಕಾರ ಬಿಟ್ಟು ಕೊಟ್ರೆ ಮಾತ್ರವೇ ಬೇರೆಯವರಿಗೆ ಅವಕಾಶ ಸಿಗಬಹುದು ಎಂಬುದಾಗಿ ತಿಳಿಸಿದ್ದಾರೆ.
ಇನ್ನೂ ಸಿಎಂ ಆಗೋ ಕನಸಿನಲ್ಲಿದ್ದಂತ ಡಿಕೆ ಶಿವಕುಮಾರ್ ಅವರಿಗೆ, ಸಿದ್ಧರಾಮಯ್ಯ ತಾನಾಗಿಯೇ ಅಧಿಕಾರ ಬಿಟ್ಟುಕೊಟ್ಟರೆ ಮಾತ್ರವೇ ಅದು ಸಾಧ್ಯವಾಗಲಿದೆ. ಇಲ್ಲ ಅಂದರೇ ಡಿಕೆಶಿಗೆ ಅಧಿಕಾರ ಸಿಗೋದಿಲ್ಲ ಎಂಬುದಾಗಿ ಮಾರ್ಮಿಕವಾಗಿ ನುಡಿದಿದ್ದಾರೆ.








