ರಾಯಚೂರು : ಮಂತ್ರಾಲಯದ ರಾಯರ ಮಠಕ್ಕೂ ಇದೀಗ ಭಾಷಾ ವಿವಾದ ತಟ್ಟಿದೆ. ಆಂಧ್ರಪ್ರದೇಶದ ಮಂತ್ರಾಲಯದಲ್ಲಿರುವ ರಾಯರ ಮಠಕ್ಕೆ ಇದೀಗ ಭಾಷಾ ವಿವಾದ ತಟ್ಟಿದೆ. ಮಠದ ಮುಖ್ಯ ದ್ವಾರದ ಬಳಿ ಇರುವ ರಾಘವೇಂದ್ರ ಶ್ರೀಗಳ ಶ್ಲೋಕ ಇದೀಗ ವಿವಾದಕ್ಕೆ ಕಾರಣವಾಗಿದೆ.
ಕನ್ನಡ ಭಾಷೆಯಲ್ಲಿಯೇ ರಾಯರ ಶ್ಲೋಕದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಹೌದು ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ಅಂತ ಕನ್ನಡದಲ್ಲಿ ಒಂದು ಶ್ಲೋಕ ಇದೆ ಶ್ಲೋಕದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಅಪ್ಲೋಡ್ ಮಾಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ ಸಿಎಂ ಡಿಸಿಎಂ ಅವರೇ ತೆಲುಗು ಮಂಡಳಿ ಎಲ್ಲಿದೆ ಸಾರ್? ಮಂತ್ರಾಲಯ ಆಂಧ್ರಪ್ರದೇಶದ ಭಾಗವಾಗಿದೆ, ಅಲ್ಲಿ ತೆಲುಗು ಭಾಷೆಯನ್ನು ಸಂಪೂರ್ಣವಾಗಿ ಹೇಗೆ ಕೈಬಿಡುತ್ತಾರೆ? ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.








