ಬೆಂಗಳೂರು : ರಾಜ್ಯ ಕಾಂಗ್ರೆಸ್ ನಲ್ಲಿ ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಚರ್ಚೆ ವಿಚಾರಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಅಡಿಕೆ ಶಿವಕುಮಾರ್ ನಡುವೆ, ಶೀತಲ ಸಮರ ನಡೆದಿದೆ. ಇದರ ಮಧ್ಯ ಸಚಿವ ಎಂಬಿ ಪಾಟೀಲ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಪೂರ್ಣಾವಧಿ ಮುಖ್ಯಮಂತ್ರಿ ಆಗಲು ಬಿಡಲಿಲ್ಲ. ಅವರಿಗೆ ಕಣ್ಣೀರು ಹಾಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ಹೇಳುವವರೆಗೂ ನಾನೆ ಮುಖ್ಯಮಂತ್ರಿ ಅಂತ ಹೇಳಿದ್ದಾರೆ ಬಿಜೆಪಿಯವರು ಯಡಿಯೂರಪ್ಪ ಅವರನ್ನು ಮುಂದುವರಿಸಲು ಬಿಡಲಿಲ್ಲ ಸಿಎಂ ಆಗಿ ಯಡಿಯೂರಪ್ಪ ಅವರನ್ನು ಪೂರ್ಣಾವಧಿ ಮುಗಿಸಲು ಬಿಟ್ಟಿಲ್ಲ ಬಿಜೆಪಿ ಹೈಕಮಾಂಡ್ ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿದರು ಎಂದರು.
ಡಿಕೆ ಶಿವಕುಮಾರ್ ಬಹಳ ಶ್ರಮಪಟ್ಟು ಪಕ್ಷದ ಕೆಲಸ ಮಾಡಿದ್ದಾರೆ ಅವರು ಶ್ರಮಪಟ್ಟಿದ್ದಾರೆ ಅದರಲ್ಲಿ ಬೇರೆ ಮಾತಿಲ್ಲ ಅಹಿಂದ ಸಮಾವೇಶ ಮಾಡುವುದರಲ್ಲಿ ತಪ್ಪೇನಿದೆ ಪಕ್ಷವನ್ನು ಬಲಗೊಳಿಸಲು ಸಮಾವೇಶ ಮಾಡಿದರೆ ತಪ್ಪಿಲ್ಲ ಸ್ಥಳೀಯ ಚುನಾವಣೆಗಳಲ್ಲಿ ಮೈತ್ರಿ ಇಲ್ಲ ಎಂದು ವಿಚಾರಕ್ಕೆ ಸಂಬಂಧಪಟ್ಟಂತೆ ಅದು ಅವರ ಪಕ್ಷದ ವಿಚಾರ ಎಂದು ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿಳಿಸಿದರು.








