ಮೈಸೂರು : ಮೈಸೂರು ಅರಮನೆ ಮುಂಭಾಗ ಹಿಲಿಯಂ ಸ್ಪೋಟದಿಂದ ಬಲೂನ್ ಮಾರಾಟಗಾರ ಸಲೀಂ ಸೇರಿದಂತೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುಳಾ ಹಾಗೂ ಲಕ್ಷ್ಮೀಸಹ ಸಾವನ್ನಪ್ಪಿದ್ದು ಮೃತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ ಇದೀಗ ಹೂವಿನ ವ್ಯಾಪಾರ ಮಾಡಿಕೊಂಡಿದ್ದ ಮಂಜುಳಾ ಅವರ ಸಾವಿನ ಸುದ್ದಿ ಕೇಳಿ ಅವರ ಸಹೋದರ ಪರಮೇಶ್ವರ ಅವರು ಕೂಡ ಇಂದು ಸಾವನ್ನಪ್ಪಿದ್ದಾರೆ.
ಹೌದು ತಂಗಿ ಮಂಜುಳಾ ಸಾವಿನ ಸುದ್ದಿ ಕೇಳಿ ಅಣ್ಣ ಪರಮೇಶ್ವರ್ (60) ಇದೀಗ ಸಾವನಪ್ಪಿದ್ದಾರೆ ಹೀಲಿಯಂ ಸಿಲಿಂಡರ್ ಸ್ಪುಟದಿಂದ ಮಂಜುಳ ಗಾಯಗೊಂಡಿದ್ದರು. ಚಿಕಿತ್ಸೆ ಫಲಕಾರಿಯಾಗಿದೆ ನಿನ್ನೆ ಆಸ್ಪತ್ರೆಯಲ್ಲಿ ಮಂಜುಳಾ ಸಾವನಪ್ಪಿದ್ದಾರೆ ತಂಗಿ ಮಂಜುಳಾ ಸಾವಿನ ಸುದ್ದಿ ಕೇಳಿ ಅಣ್ಣ ಪರಮೇಶ್ವರ್ ಇದೀಗ ಸಾವನಪ್ಪಿದ್ದಾರೆ ನಂಜನಗೂಡು ತಾಲೂಕಿನ ಚಾಮಲಾಪುರದ ನಿವಾಸಿ ಪರಮೇಶ್ವರ್ ಸಾವನ್ನಪ್ಪಿದ್ದಾರೆ ಪರಮೇಶ್ವರ್ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.








