ಬೆಳಗಾವಿ : ದಂಪತಿ ಮತ್ತು ಮಕ್ಕಳ ಮೇಲೆ ಬೀದಿ ನಾಯಿಗಳು ಡೆಡ್ಲಿ ಅಟ್ಯಾಕ್ ನಡೆಸಿವೆ. ರಸ್ತೆಯಲ್ಲಿ ಹೋಗುತ್ತಿದ್ದಾಗ ಬೀದಿ ನಾಯಿಗಳು ಏಕಾಏಕಿ ಮಕ್ಕಳ ಮೇಲೆ ದಾಳಿ ಮಾಡಿವೆ ಬೆಳಗಾವಿಯ ಜೋಶಮಾಳಾದಲ್ಲಿ ಈ ಒಂದು ಘಟನೆ ನಡೆದಿದೆ.
ಬೆಳಗಾವಿಯ ಜೋಶಮಾಳಾದಲ್ಲಿ ಟ್ಯೂಷನ್ ಮುಗಿಸಿಕೊಂಡು ಮಕ್ಕಳೊಂದಿಗೆ ತಾಯಿ ಒಬ್ಬರು ಬರುತ್ತಿದ್ದರು. ಈ ವೇಳೆ ಗುಂಪು ಕಟ್ಟಿಕೊಂಡು ನಾಯಿಗಳು ದಾಳಿ ಮಾಡಿದಂತಹ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೂದಲೆಳೆ ಅಂತರದಲ್ಲಿ ಮಕ್ಕಳು ಹಾಗೂ ಮಹಿಳೆ ಪಾರಾಗಿದ್ದಾರೆ. ಹೊರಗಡೆ ಓಡಾಡೋದಕ್ಕೂ ನಿವಾಸಿಗಳು ಭಯಪಡುತ್ತಿದ್ದಾರೆ ಬೀದಿನಾಯಿಗಳಿಗೆ ಕಡಿವಾಣ ಕಡಿವಾಣ ಹಾಕಿದ್ದರಿಂದ ಮಹಾನಗರ ಪಾಲಿಕೆಗಳ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಬೀದಿ ನಾಯಿಗಳ ಅಟ್ಟಹಾಸ ಮುಂದುವರೆದಿದ್ದು ಈ ವರ್ಷದಲ್ಲಿ 19769 ಮಂದಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿವೆ ಜನವರಿಯಿಂದ ಡಿಸೆಂಬರ್ ವರೆಗೆ 19,000ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿಗಳು ದಾಳಿ ಮಾಡಿವೆ ಬೆಳಗಾವಿ ಜಿಲ್ಲೆ ಮತ್ತು ನಗರದಲ್ಲಿ ಜನರ ಮೇಲೆ ನಾಯಿಗಳು ದಾಳಿ ಮಾಡಿದೆ ಎಂದು ಆರೋಗ್ಯ ಇಲಾಖೆ ಅಧಿಕೃತವಾಗಿ ಅಂಕಿ ಅಂಶ ಬಿಡುಗಡೆ ಮಾಡಿದೆ ಮಕ್ಕಳು ವಿರುದ್ಧರು ಮಹಿಳೆಯರೇ ವಾಹನಗಳಿಗೆ ಟಾರ್ಗೆಟ್ ಆಗಿವೆ ಎಂದು ತಿಳಿದು ಬಂದಿದೆ.








