ಮೈಸೂರು : ಜನವರಿಯಲ್ಲಿ ಅಹಿಂದ ಸಮಾವೇಶ ನಡೆಸಲಾಗುತ್ತಿದ್ದು, ಅಹಿಂದ ಸಮಾವೇಶದ ಬಗ್ಗೆ ಜೆಡಿಎಸ್ ವರಿಷ್ಠ ದೇವೇಗೌಡ ವ್ಯಂಗ್ಯವಾಡಿದ್ದು ಸಿಎಂ ಸಿದ್ದರಾಮಯ್ಯ ಮೈಸೂರು ನಲ್ಲಿ ಅಹಿಂದ ಸಮಾವೇಶ ಮಾಡುತ್ತಿದ್ದಾರೆ ಅಹಿಂದ ವ್ಯಾಖ್ಯಾನ ಮಾಡಲು ನನಗೆ ಕಷ್ಟವಾಗುತ್ತದೆ. ಅಹಿಂದ ಹೇಳಲು ಸ್ವಲ್ಪ ತಡವರಿಸುತ್ತೇವೆ. ಹೇಳುವುದು ಸಹ ಕಷ್ಟ ಆಗಿದೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರಲ್ಲಿ ಮಾತನಾಡಿದ ಅವರು, ಮಹಿಳೆಯರಿಗೆ ಚುನಾವಣೆಯಲ್ಲಿ ಮೀಸಲಾತಿ ಕೊಟ್ಟವರು ಯಾರು? ಮುಸ್ಲಿಂ ಸಮುದಾಯಕ್ಕೂ ಮೀಸಲಾತಿ ಕೊಟ್ಟಿದ್ದೇನೆ ನಾಯಕ ಸಮುದಾಯಕ್ಕೆ ಮೀಸಲಾತಿ ಕೊಟ್ಟವರು ಯಾರು? ಸಿದ್ದರಾಮಯ್ಯ ಅವರನ್ನು ನಾವು ಗುರುತಿಸಿದ್ದೇವೆ ಅಂತ ಹೇಳುವುದಿಲ್ಲ ನನ್ನ ಬಗ್ಗೆ ಅವರು ಎಷ್ಟಾದರೂ ಟೀಕೆ ಮಾಡಲಿ. ಸಿದ್ದರಾಮಯ್ಯ ಮೊದಲ ಮಗ ಮೃತಪಟ್ಟಾಗ ನಾನು ಮನೆಗೆ ಹೋಗಿದ್ದೆ ಸಿಎಂ ಸಿದ್ದರಾಮಯ್ಯನವರ ಎರಡನೇ ಮಗ ಡಾಕ್ಟರ್ ಆಗಿದ್ದಾರೆ ಯಾವ ಲೇಬಲ್ ಇಟ್ಟುಕೊಂಡು ಅಹಿಂದ ಅಂದ ಮಾತನಾಡುತ್ತೀರಿ? ಎಂದರು.
ಕಳೆದ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧಿಸಬೇಕು ಎಂದು ಚರ್ಚಿಸಿದ್ದರು. ಕೋಲಾರ ಬಾದಾಮಿ ಹೀಗೆ ಎಲ್ಲಿ ನಿಲ್ಲಬೇಕು ಎಂದು ಚರ್ಚೆಯಾಗಿತ್ತು. ಅಹಿಂದ ವೋಟ್ ಹಾಕುತ್ತಾರೆ ಅಂದರೆ ಎಲ್ಲಿ ಬೇಕಾದರೂ ಚುನಾವಣೆಗೆ ನಿಲ್ಲಬಹುದಾಗಿತ್ತು ಏಕೆ ನಿಮ್ಮ ಮಗನ ಕ್ಷೇತ್ರವನ್ನು ಖಾಲಿ ಮಾಡಿಸಿ ಸ್ಪರ್ಧೆ ಮಾಡಿದ್ರಿ? ಎಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ವಾಗ್ದಾಳಿ ನಡೆಸಿದರು.








