ಮೈಸೂರು: ನಗರದ ಪ್ರಸಿದ್ಧ ಅರಮನೆಯ ಮುಂಭಾಗದಲ್ಲೇ ಭೀಕರ ಅವಘಡ ಉಂಟಾಗಿದೆ. ಬಲೂನ್ ಗೆ ನೈಟ್ರೋಜನ್ ಗ್ಯಾಸ್ ತುಂಬಿಸುವಾಗ ಸ್ಪೋಟಗೊಂಡಿರುವಂತ ಘಟನೆ ನಡೆದಿದೆ.
ಮೈಸೂರಿನ ಅರಮನೆ ಮುಂಭಾಗದಲ್ಲಿ ಬಲೂನುಗಳಿಗೆ ನೈಟ್ರೋಜನ್ ಗ್ಯಾಸ್ ತುಂಬಿಸುತ್ತಿದ್ದಾಗಲೇ ಸ್ಪೋಟ ಸಂಭವಿಸಿದೆ. ಇದರಿಂದಾಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೇ, ಮಹಿಳೆ ಸೇರಿದಂತೆ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಕೃಷ್ಣರಾಜ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.








