ಬೆಂಗಳೂರು: ರಾಜ್ಯದ ಮಲೆನಾಡಿನ ಭಾಗಗಳಲ್ಲಿ ಮಂಗನ ಕಾಯಿಲೆ ಆರ್ಭಟಿಸುತ್ತಿದೆ. ಈ ಕಾಯಿಲೆಯನ್ನು ನಿಯಂತ್ರಣಕ್ಕಾಗಿ ಸಾರ್ವಜನಿಕರು ಈ ಕ್ರಮಗಳನ್ನು ಅನುಸರಿಸುವಂತೆ ಸರ್ಕಾರ ಸೂಚಿಸಿದೆ.
ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಮಂಗನ ಕಾಯಿಲೆ ತಡೆಗಟ್ಟಲು ಸಾರ್ವಜನಿಕರು ಏನು ಮಾಡಬೇಕು ಅಂದ್ರೆ ಕಾಡಿಗೆ ಹೋಗುವಾಗ ಸುರಕ್ಷತೆಗಾಗಿ ಮೈತುಂಬಾ ಬಟ್ಟೆ ಧರಿಸುವಂತೆ ತಿಳಿಸಿದೆ.
ಕಾಡು, ತೋಟಕ್ಕೆ ಹೋಗುವಾಗ DEPA ಉಣ್ಣೆ ವಿಕರ್ಷಕ ತೈಲವನ್ನು ಲೇಪಿಸಿಕೊಳ್ಳಿ. ಕಾಡು, ತೋಟದಿಂದ ಬಂದ ನಂತ್ರ ಬಿಸಿ ನೀರಿನಲ್ಲಿ ಸ್ನಾನ ಮಾಡಿ ಹಾಗೂ ಧರಿಸಿದ ಬಟ್ಟೆಗಳನ್ನು ಬಿಸಿ ನೀರಿನಲ್ಲಿ ನೆನೆಸಿ, ಸೋಪು ಬಳಸಿ ತೊಳೆಯಿರಿ ಎಂದಿದೆ.
ಉಣ್ಣೆ ನಿವಾರಕ ಔಷಧವನ್ನು ದನದ ಕೊಟ್ಟಿಗೆಯ ಒಳಗೆ ಮತ್ತು ಸುತ್ತಮುತ್ತಲೂ ಸಿಂಪಡಿಸಿ. ಮಂಗಗಳು ಸತ್ತಿರುವುದು ಕಂಡು ಬಂದರೇ ಗ್ರಾಮ ಪಂಚಾಯ್ತಿ, ಆರೋಗ್ಯ ಇಲಾಖೆಗೆ ಮಾಹಿತಿ ನೀಡುವಂತೆ ತಿಳಿಸಿದೆ.
ಒಣಗಿದ ಎಲೆಗಳು ಸೋಂಕಿತ ಉಣ್ಣೆಗಳನ್ನು ಹೊಂದಿರಬಹುದಾಗಿದ್ದರಿಂದ ಕಾಡಿನಿಂದ ಒಣಗಿದ ಎಲೆಗಳನ್ನು ತಂದು ಮನೆ ಅಥವಾ ಮನೆಯ ಸುತ್ತಮುತ್ತ ರಾಶಿ ಹಾಕಬೇಡಿ. ಕೈ ಗವಸುಗಳನ್ನು ಧರಿಸದೇ ಸತ್ತ ಪ್ರಾಣಿಗಳನ್ನು ಮುಟ್ಟಬೇಡಿ. ಮಂಗ ಸತ್ತ ಪ್ರದೇಶಕ್ಕೆ ಭೇಟಿ ನೀಡಿದ್ದಲ್ಲಿ ತಕ್ಷಣ ಅಧಿಕಾರಿಗಳಿಗೆ ವರದಿ ಮಾಡೋದು ಮರೆಯಬೇಡಿ.
ಚಾರಣಿಗರು ಚಾರಣದ ಸಮಯದಲ್ಲಿ ಉಣ್ಣೆ ಕಡಿತವನ್ನು ನಿರ್ಲಕ್ಷ್ಯಿಸಬೇಡಿ. DEPA ಉಣ್ಣೆ ವಿಕರ್ಷಕ ತೈಲವನ್ನು ಲೇಪಿಸಿಕೊಳ್ಳದೇ ಇರಬೇಡಿ ಎಂಬುದಾಗಿ ತಿಳಿಸಿದೆ.
ರಾಜ್ಯದಲ್ಲಿ ಈಗ ಭೂ ಪರಿವರ್ತನೆ ಮತ್ತಷ್ಟು ಸರಳ: ಕರ್ನಾಟಕ ಭೂ ಕಂದಾಯ ಕಾಯ್ದೆ 1964ಕ್ಕೆ ತಿದ್ದುಪಡಿ ಅಧಿಸೂಚನೆ ಪ್ರಕಟ








