ಬೆಂಗಳೂರು : ಬೆಂಗಳೂರಲ್ಲಿ ಎರಡು ತಿಂಗಳ ಹಿಂದೆ ವಿವಾಹವಾಗಿದ್ದ ನವ ವಿವಾಹಿತ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಂಗಳೂರಿನ ರಾಮಮೂರ್ತಿ ನಗರದ ಬಿ ಚೆನ್ನಸಂದ್ರ ದಲ್ಲಿ ನಡೆದಿದೆ. ಮನೆಯಲ್ಲಿ ನೇಣು ಬಿಗಿದುಕೊಂಡು ಗಾನವಿ (26) ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಹನಿಮೂನ್ ಗೆ ಶ್ರೀಲಂಕಾ ಗೆ ಹೋಗಿ ದಂಪತಿ ಅರ್ಧಕ್ಕೆ ಹಿಂದಿರುಗಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ಬೆಸತ್ತು ಗಾನವಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ. ಕಳೆದ ಅಕ್ಟೋಬರ್ 29ರಂದು ಗಾನ್ವಿ ಮತ್ತು ಸೂರಜ್ ಮದುವೆಯಾಗಿತ್ತು. ಸೂರಜ್ ಮನೆಯವರ ಬೇಡಿಕೆಯಂತೆ ಅದ್ದೂರಿಯಾಗಿ ಆರತಕ್ಷತೆ ನಡೆದಿತ್ತು.








