ಚಿಕ್ಕಬಳ್ಳಾಪುರ : ಹುಬ್ಬಳ್ಳಿಯಲ್ಲಿ ದಲಿತ ಯುವಕನನ್ನು ಮದುವೆಯಾಗಿದ್ದಕ್ಕೆ ತಂದೆಯೇ ತನ್ನ ಗರ್ಭಿಣಿ ಮಗಳನ್ನ ಭೀಕರವಾಗಿ ಕೊಲೆ ಮಾಡಿದ್ದ ಈ ಒಂದು ಮರ್ಯಾದಾ ಹತ್ಯೆ ಮಾಸುವ ಮುನ್ನವೇ ಚಿಕ್ಕಬಳ್ಳಾಪುರ ಜಿಲ್ಲೆಯ ಚೇಳೂರು ಪಟ್ಟಣದಲ್ಲಿ ಮರ್ಯಾದಾ ಹತ್ಯೆಯ ಶಂಕೆ ವ್ಯಕ್ತವಾಗಿದೆ. 40 ದಿನಗಳ ಗಂಡುಶಿಶುವಿನ ಸಾವಿಗೆ ಮುತ್ತಜ್ಜಿಯೇ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ
ಹೌದು ಅಪ್ರಾಪ್ತ ಮೊಮ್ಮಗಳು ಹಿಂದೂ ಯುವಕನನ್ನು ಪ್ರೀತಿಸಿ ಮದುವೆ ಮಾಡಿಕೊಂಡಿದ್ದಕ್ಕೆ ದ್ವೇಷ ಹೊಂದಿದ್ದ ಅನ್ಯಕೋಮಿಗೆ ಸೇರಿದ ಅಜ್ಜಿ, ಮೊಮ್ಮಗಳ 40 ದಿನದ ನವಜಾತ ಶಿಶುವನ್ನು ಕೊಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಪ್ರೀತಿಸಿ ಮದುವೆಯಾದ ದಂಪತಿಗೆ ಜನಸಿದ್ದ ಗಂಡು ಮಗು ಡಿಸೆಂಬರ್ 21 ರಂದು ಮೃತಪಟ್ಟಿದೆ.
ಸಾವು ಸಂಭವಿಸಿದ ವೇಳೆ ಮಗು ಅಜ್ಜಿ ಬಳಿ ಇತ್ತು. ಆದರೆ, ಈ ಕುರಿತು ಪೊಲೀಸರಿಗೆ ಮಾಹಿತಿ ನೀಡುವ ಅಗತ್ಯವಿಲ್ಲ ಎಂದು ಅಜ್ಜಿ ವಾದಿಸಿದ್ದಾಳೆ ಎನ್ನಲಾಗಿದೆ. ಆದರೆ ತನ್ನ ಮಗುವಿನ ಸಾವಿನಲ್ಲಿ ಅಜ್ಜಿಯ ಕೈವಾಡವಿದೆ ಎಂಬ ಅನುಮಾನ ವ್ಯಕ್ತಪಡಿಸಿದ 17 ವರ್ಷದ ಅಪ್ರಾಪ್ತ ಬಾಲಕಿ, ಚೇಳೂರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.







