ಬೆಂಗಳೂರು : ಪಿ.ಎಂ.ಪೋಷಣ್ ಯೋಜನೆಯಡಿ ತೊಗರಿಬೇಳೆ ಸ್ವೀಕೃತಿ ಮತ್ತು ನಿರ್ವಹಣೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾರ್ಗಸೂಚಿ ಪ್ರಕಟಿಸಿದೆ.
ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಅಭಿಯಾನ ಯೋಜನೆಯಡಿಯಲ್ಲಿ ಶಾಲೆಗಳಲ್ಲಿರುವ ತೊಗರಿಬೇಳೆ ನಿರ್ವಹಣೆ ಕುರಿತು ಹಾಗೂ ಉದ್ಭವಿಸಿರುವ ಗುಣಮಟ್ಟದ ಬಗ್ಗೆ ದೂರುಗಳು ವಿವಿಧ ಸಂಘ ಸಂಸ್ಥೆ/ ವಯಕ್ತಿಕವಾಗಿ ನೀಡಿದ ಪ್ರಯುಕ್ತ ಈ ಸಂಬಂಧ ಸೂಕ್ತ ನಿರ್ವಹಣೆಗಾಗಿ ಮಾರ್ಗಸೂಚಿಯನ್ನು ಹೊರಡಿಸುವುದು ಅಗತ್ತವಾಗಿರುತ್ತದೆ. ಈ ಹಿನ್ನಲೆಯಲ್ಲಿ ಅನುಷ್ಠಾನಾಧಿಕಾರಿಗಳು, ತಾಲೂಕು ಹಂತದ ವಿವಿಧ ಅಧಿಕಾರಿಗಳು ಹಾಗೂ ಶಾಲಾ ಹಂತದಲ್ಲಿರುವವರು ಜವಾಬ್ದಾರಿಯಿಂದ ಕೆಲಸ ನಿರ್ವಹಿಸುವ ಅಗತ್ತತೆ ಇರುತ್ತದೆ. ನಿರ್ವಹಣೆ ಕೊರತೆಯಿಂದಾಗಿ ತೊಗರಿಬೇಳೆ ಗುಣಮಟ್ಟದ ಬಗ್ಗೆ ದೂರುಗಳು ಬರುತ್ತಿದ್ದು ಇದಕ್ಕಾಗಿ ಕೊನೆಯ ಹಂತದವರೆಗೂ ಮೇಲ್ವಿಚಾರಣೆ ಮಾಡುವುದು ಅಗತ್ಯವಾಗಿರುತ್ತದೆ. ಈ ಸಂಬಂಧ ಈ ಮುಂದಿನಂತೆ ಮಾರ್ಗಸೂಚಿಯನ್ನು ಹೊರಡಿಸಲಾಗಿದೆ.
ತಾಲೂಕಾ ಹಂತದಲ್ಲಿ ಸ್ವೀಕೃತವಾಗುವ ತೊಗರಿಬೇಳೆಯ ಪರಿಶೀಲನೆ:
ಈಗಾಗಲೇ ಸರ್ಕಾರವು ಸೂಚಿಸಲಾದ ಸಮಿತಿಯಂತೆ (Committee)ತೊಗರಿಬೇಳೆ ಪೂರೈಕೆದಾರರಿಂದ ಸ್ವೀಕರಿಸುವ ಪೂರ್ವದಲ್ಲಿ ಎಲ್ಲಾ ಅಧಿಕಾರಿಗಳು ಉಪಸ್ಥಿತರಿದ್ದು ಪೂರೈಕೆದಾರರು ಟೆಂಡರ ಅವಧಿಯಲ್ಲಿ ನೀಡಲಾದ ಷರತ್ತುಗಳಿಗೆ ಅನುಗುಣವಾಗಿ ಮಾನಂದಡಗಳ ಪ್ರಕಾರ ಇರುವ ಬಗ್ಗೆ ಗುಣಮಟ್ಟ, ಪರಿಮಾಣ, ಪರಿಶೀಲನೆ ಮಾಡಿ ದೃಢೀಕರಿಸಿಕೊಂಡ ನಂತರವೇ ದಾಸ್ತಾನನ್ನು ಸ್ವೀಕರಿಸತಕ್ಕದ್ದು.
ತೊಗರಿಬೇಳೆ ಪರಿಶೀಲನೆ ಮಾಡುವಾಗ ಟೆಂಡರ್ ಷರತ್ತುಗಳಲ್ಲಿ ವಿಧಿಸಿರುವ (Parameter)ಮಾನದಂಡದ ಪ್ರಕಾರ ಮಾದರಿಗಳನ್ನು Unload ಮಾಡುವುದಕ್ಕಿಂತ ಮುಂಚಿತವಾಗಿ ನಿಗಧಿತ ಪ್ರಮಾಣದಲ್ಲಿ ಮಾದರಿಗಳನ್ನು ಅಸೈಯರ್ ಎಲ್ಲರ ಸಮಕ್ಷಮ ಸ್ವೀಕರಿಸಿ ಪರಿಶೀಲನೆಗೊಳಪಡಿಸತಕ್ಕದ್ದು.
ಪರಿಶೀಲಿಸಿದ ನಂತರ ತೊಗರಿಬೇಳೆಯ ಸಂಗ್ರಹವು ವ್ಯವಸ್ಥಿತವಾಗಿ ದೂಳು,ನೀರು, ಆದ್ರತೆ ಇಲ್ಲದೇ ಇರುವಂತಹ ಸ್ಥಳದಲ್ಲಿ ಸಂಗ್ರಹಿಸಿ ಇಡತಕ್ಕದ್ದು.
ಸಹಾಯಕ ನಿರ್ದೇಶಕರು,ಪಿ.ಎಂ.ಪೋ. ಇವರು ವಿವಿಧ ಶಾಲೆಯ ಅಡುಗೆ ಕೇಂದ್ರಗಳಿಗೆ ಪೂರೈಸುವ ಪೂರ್ವದಲ್ಲಿ ಶಾಲೆಯಲ್ಲಿ ಉಳಿದ ದಾಸ್ತಾನಿನ ಪ್ರಮಾಣ ಹಾಗೂ ಬೇಡಿಕೆ ಹಾಗೂ ಅಗತ್ಯವಿರುವ ಪರಿಮಾಣಕ್ಕನುಗುಣವಾಗಿ ವಿತರಣೆ ಮಾಡಲು ಖುದ್ದಾಗಿ ಕ್ರಮವಹಿಸತಕ್ಕದ್ದು.
ಶಾಲೆಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಪಿ.ಎಂ.ಪೋಷಣ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಬಿಸಿಯೂಟವನ್ನು ಸೇವಿಸಿ,ಅದರ ಗುಣಮಟ್ಟ ಮತ್ತು ರುಚಿಯ ಬಗ್ಗೆ ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಬೇಕು.
ಶಾಲಾ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳು
ಶಾಲೆಗೆ ತೊಗರಿಬೇಳೆ ಪೂರೈಕೆದಾರರು ಪೂರೈಕೆ ಮಾಡುವ ಸಂದರ್ಭದಲ್ಲಿ ಮುಖ್ಯಶಿಕ್ಷಕರು,ತಮ್ಮ ಶಾಲೆಗೆ ಅಗತ್ಯಕ್ಕನುಗುಣವಾಗಿ ಪೂರೈಕೆ ಆಗುತ್ತಿದೆ ಎನ್ನುವ ಹಿನ್ನಲೆಯಲ್ಲಿ ಹಿಂದೆ ಉಳಿದಿರುವ ದಾಸ್ತಾನು ಮತ್ತು ಪೂರೈಸಲಾಗುತ್ತಿರುವ ತೊಗರಿಬೇಳೆ “ ಸಾಕಾಗುತ್ತಿದೆಯೋ ದೃಢೀಕರಿಸಿಕೊಳ್ಳತಕ್ಕದ್ದು. ಎಂದು
ಶಾಲೆಯಲ್ಲಿ ಉಳೆದಿರುವ ತೊಗರಿಬೇಳೆಯನ್ನು ಸಂಪೂರ್ಣವಾಗಿ ಬಳಕೆ ಮಾಡಿದ ನಂತರವೇ ಹೊಸದಾಗಿ ಪೂರೈಕೆ ಮಾಡಿದ ತೊಗರಿಬೇಳೆಯನ್ನುFIFO ಮಾದರಿಯಲ್ಲಿ ಬಳಕೆ ಮಾಡುವುದು.
ಸ್ವೀಕರಿಸಿದ ತೊಗರಿಬೇಳೆಯ ಪ್ರತಿ ಚೀಲವನ್ನು ಬಿಚ್ಚಿ ಹೊರತೆಗೆದು ಸಂಪೂರ್ಣವಾಗಿ ಹರಡಿ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಬೇಕು. ಹಾಗೂ ಈ ಸನ್ನೀವೇಶದGPRS ಭಾವಚಿತ್ರವನ್ನು ತೆಗೆದು ಎಸ್.ಎ.ಟಿ.ಎಸ್. Upload ಮಾಡತಕ್ಕದ್ದು.
ಗುಣಮಟ್ಟ ಕಾರ್ಯವನ್ನು ಪರಿಶೀಲಿಸಿ ಮುಖ್ಯಶಿಕ್ಷಕರು72 (Working Hours) ಗಂಟೆಯೊಳಗಾಗಿ ವರದಿಯನ್ನು ಸಹಾಯಕ ನಿರ್ದೇಶಕರು, ಪಿ.ಎಂ.ಪೋ. ತಾ.ಪಂ ಇವರಿಗೆ ವರದಿ ನೀಡತಕ್ಕದ್ದು. ಹಾಗೂ ಗುಣಮಟ್ಟ ಪರಿಶೀಲನೆ ಮಾಡುವ GPRS ಛಾಯಾಚಿತ್ರವನ್ನು SATS ನಲ್ಲಿ UPLOAD ಮಾಡತಕ್ಕದ್ದು.
ಒಂದು ವೇಳೆ ಗುಣಮಟ್ಟ ವ್ಯತ್ಯಾಸವಿದ್ದಲ್ಲಿ ಅದನ್ನು ಕೂಡಲೇ ಮುಖ್ಯಶಿಕ್ಷಕರು ತಾಲೂಕಿನADPI ರವರ ಗಮನಕ್ಕೆ ತಂದು ಕೂಡಲೇ ಬದಲಾಯಿಸುವ ಸಂಬಂಧ ಪತ್ರ ಮೂಲಕ ತಿಳಿಸತಕ್ಕದ್ದು. ಹಾಗೂ ಟೆಂಡರದಾರರು ದೂರನ್ನು ಸ್ವೀಕರಿಸಿದ ತಕ್ಷಣ ಬದಲಾಯಿಸಿಕೊಡತಕ್ಕದ್ದು.
ತೊಗರಿಬೇಳೆ ಗುಣಮಟ್ಟವನ್ನು ಸಂರಕ್ಷಿಸಲು15 ದಿನಗಳಿಗೊಮ್ಮೆ ಅಡುಗೆ ಸಿಬ್ಬಂದಿಯವರ ಸಹಕಾರದೊಂದಿಗೆ ಸಂಪೂರ್ಣವಾಗಿ ಚೀಲವನ್ನು ವನ್ನು ಬಿಚ್ಚಿ, ಸ್ವಚ್ಚವಾದ ಸ್ಥಳದಲ್ಲಿ ಹರಡಿ ಒಣಗಿಸಿ ಆರೋಗ್ಯಕರವಾಗಿರುವಂತೆ ಸಂರಕ್ಷಿಸಲು ಕ್ರಮಕೈಗೊಳ್ಳತಕ್ಕದ್ದು. ಹಾಗೂ GPRS ಛಾಯಾಚಿತ್ರವನ್ನು SATS ನಲ್ಲಿ UPLOAD ಮಾಡತಕ್ಕದ್ದು.
ಆಹಾರಧಾನ್ಯಗಳಿಗೆ ಸಂಬಂಧಿಸಿದಂತೆ ನಿಖರವಾದ ಬೇಡಿಕೆಯನ್ನು ಸರಿಯಾದ ಸಮಯಕ್ಕೆ ಬೇಡಿಕೆ ಸಲ್ಲಿಸತಕ್ಕದ್ದು.
ಶಾಲೆಯ ಮುಖ್ಯ ಶಿಕ್ಷಕರು ಆಹಾರ ಧಾನ್ಯಗಳನ್ನು ಅಡುಗೆಗೆ ಬಳಸುವಕ್ಕಿಂತ ಪೂರ್ವದಲ್ಲಿ ಆಹಾರ ಧಾನ್ಯಗಳು ಗುಣಮಟ್ಟದಿಂದ ಕೂಡಿದಿಯೇ ಹಾಗೂ ಬಳಕೆಗೆ ಯೋಗ್ಯವಾಗಿದೆಯೇ ಖಚಿತ ಪಡಿಸಿಕೊಳ್ಳುವುದು.
ಪಿಎಂ ಪೋಷಣ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗುವ ಬಿಸಿಯೂಟದ ಗುಣಮಟ್ಟ ಮತ್ತು ರುಚಿಯ ಬಗ್ಗೆ ಪ್ರತಿನಿತ್ಯ ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಬೇಕು.
ಮೇಲ್ವಿಚಾರಣೆ ಮತ್ತು ತಪಾಸಣೆ:
ಜಿಲ್ಲೆ ಮತ್ತು ತಾಲೂಕಿನ ಅಧಿಕಾರಿಗಳು ಕೆಳಕಂಡಂತೆ ನಿರ್ದಿಷ್ಟಪಡಿಸಿದ ಶಾಲೆಗಳ ತಪಾಸಣೆ ನಡೆಸುವುದು. ಹಾಗೂ ಕೆಳಹಂತದಲ್ಲಿ ಅಧಿಕಾರಿಗಳು ಶೀಫಾರಸು ಮಾಡಿದ ನ್ಯೂನತೆಗಳನ್ನು ಸರಿಪಡಿಸಲು ಕ್ರಮ/ಶಿಸ್ತುಕ್ರಮಜರುಗಿಸಿ ಮೇಲಾಧಿಕಾರಿಗಳಿಗೆ ವರದಿ ನೀಡತಕ್ಕದ್ದು.
CRP, BRP/ECO ರವರ ಜವಾಬ್ದಾರಿಗಳು :-
CRPತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಪ್ರತಿ ತಿಂಗಳು ಕನಿಷ್ಠ2 ಬಾರಿ ಭೇಟಿ ನೀಡತಕದ್ದು ಹಾಗೂ ವರದಿಗಳನ್ನು ಅಗತ್ಯಕ್ರಮಕ್ಕೆ ಮೇಲಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸತಕ್ಕದ್ದು.
ECO/BRPತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಶಾಲೆಗಳಿಗೆ ಪ್ರತಿ ತಿಂಗಳು ಕನಿಷ್ಠ1 ಬಾರಿ ಭೇಟಿ ನೀಡತಕದ್ದು ಹಾಗೂ ವರದಿಗಳನ್ನು ಅಗತ್ಯಕ್ರಮಕ್ಕೆ ಮೇಲಾಧಿಕಾರಿಗಳಿಗೆ ಲಿಖಿತವಾಗಿ ಸಲ್ಲಿಸತಕ್ಕದ್ದು.
ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ, CRP, BRP/ECOರವರುಗಳು ಶಾಲಾ ಬೇಟಿಯ ಸಂದರ್ಭದಲ್ಲಿ ಸ್ವೀಕೃತವಾಗುತ್ತಿರುವ ತೊಗರಿಬೇಳೆ/ ಇತರೆ ಧಾನ್ಯಗಳ ಗುಣಮಟ್ಟವನ್ನು ಸಂರಕ್ಷಣೆ ಮಾಡುತ್ತಿರುವ ಬಗ್ಗೆ ಕಡ್ಡಾಯವಾಗಿ ಪರಿಶೀಲನೆ ಮಾಡತಕ್ಕದ್ದು ಹಾಗೂ ಕನಿಷ್ಠ ಪಕ್ಷ ಪ್ರತಿ ತಿಂಗಳು ಎರಡು ಬಾರಿ ಆದರೂ ಶಾಲೆಗಳಿಗೆ ಭೇಟಿ ನೀಡಿ, ದಾಸ್ತಾನು ಕೊಠಡಿ, ಲೆಕ್ಕಪತ್ರ/ಪಾವತಿ ಇತ್ಯಾದಿಗಳ ನಿರ್ವಹಣೆಯನ್ನು ಪರಿಶೀಲಿಸಿ ಕ್ಷೇತ್ರಶಿಕ್ಷಣಾಧಿಕಾರಿಗಳ ಗಮನಕ್ಕೆ ಲಿಖಿತವಾಗಿ ತರತಕ್ಕದ್ದು.
ಪಿ.ಎಂ.ಪೋಷಣ್ ಯೋಜನೆಯ ಅನುಷ್ಠಾನವು ಜಿಲ್ಲೆ/ತಾಲೂಕು ಹಂತದ ಅನುಷ್ಠಾನಾಧಿಕಾರಿಗಳ ಜವಾಬ್ದಾರಿ ಆಗಿದ್ದು ಇವುಗಳ ನಿರ್ವಹಣೆ ಗುಣಮಟ್ಟದ ವಿತರಣೆ,ಸಂರಕ್ಷಣೆ ಬಗ್ಗೆ ದೋಷಗಳು ಕಂಡುಬಂದಲ್ಲಿ ತಕ್ಷಣ ಪರಿಹಾರ ಮಾಡಬೇಕಾಗಿದ್ದು ಜವಾಬ್ದಾರಿ ಆಗಿರುತ್ತದೆ ವಿಫಲರಾದಲ್ಲಿ ವಿವಿಧ ಸ್ಥರದ ಅಧಿಕಾರಿಗಳು ಶಿಸ್ತುಕ್ರಮಕ್ಕೆ ಅರ್ಹರಾಗಿರುತ್ತಾರೆ.
ಶಾಲೆಗೆ ಸಂದರ್ಶನ ನೀಡಿದ ಸಂದರ್ಭದಲ್ಲಿ ಪಿ.ಎಂ.ಪೋಷಣ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿರುವ ಬಿಸಿಯೂಟವನ್ನು ಸೇವಿಸಿ,ಅದರ ಗುಣಮಟ್ಟ ಮತ್ತು ರುಚಿಯ ಬಗ್ಗೆ ಪರೀಕ್ಷಿಸಿ ಖಾತ್ರಿಪಡಿಸಿಕೊಳ್ಳಬೇಕು.









