ಬೆಂಗಳೂರು :ಕಳೆದ ಕೆಲವು ದಿನಗಳ ಹಿಂದೆ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆಯಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಈ ಒಂದು ಸುದ್ದಿ ಹರಿದಾಡಿತ್ತು. ಅದರ ಬೆನ್ನಲ್ಲೇ ಆರೋಗ್ಯ ಇಲಾಖೆ ಮೊಟ್ಟೆಗಳನ್ನು ಲ್ಯಾಬ್ ಟೆಸ್ಟಿಗೆ ಪ್ರವಾಸಿ ಪರೀಕ್ಷೆಗೆ ಒಳಪಡಿಸಿದ್ದರು. ಇದೀಗ ಕೇಕ್ ನಲ್ಲಿ ಕೆಮಿಕಲ್ ಬಳಸುವುದರಿಂದ ಹಲವು ರೋಗಗಳು ಬರುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷ ವೇಳೆ ಕೇಕ್ ತಿನ್ನುವ ಮುನ್ನ ಎಚ್ಚರದಿಂದ ಇರಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಡಿಸೆಂಬರ್ ಬಂದರೆ ಸಾಕು ಕ್ರಿಸ್ಮಸ್ ಹೊಸ ವರ್ಷಾಚರಣೆ ಎಲ್ಲೆಡೆ ಭರ್ಜರಿಯಾಗಿ ಮಾಡಲಾಗುತ್ತೆ. ಕ್ರಿಸ್ಮಸ್ ಮತ್ತು ನ್ಯೂ ಇಯರ್ ಹಿನ್ನೆಲೆಯಲ್ಲಿ ಬೇಕರಿ ಮಾಲೀಕರಿಗೆ ಈ ಒಂದು ಸೀಸನ್ ನಲ್ಲಿ ಭಾರಿ ವ್ಯಾಪಾರ ಆಗುತ್ತೆ. ಕೇಕ್ಗಳ ತಯಾರಿ ವೇಳೆ ಕೃತಕ ಬಣ್ಣಗಳ ಬಳಕೆ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು. ಹೀಗಾಗಿ ಕಲರ್ ಕಲರ್ ಕೇಕ್ಗಳ ಖರೀದಿಗೂ ಮುನ್ನ ಎಚ್ಚರವಿರಲಿ. ಹೌದು ಈ ನಡುವೆ ವೈದ್ಯರು ನೀಡಿರೋ ಅಭಿಪ್ರಾಯ ಬೆಚ್ಚಿ ಬೀಳಿಸುವಂತಿದ್ದು, ನಾವು ತಿನ್ನುವ ರುಚಿ ರುಚಿಯಾದ ಕಲರ್ ಕಲರ್ ಕೇಕ್ಗಳು ಭೀಕರ ಕಾಯಿಲೆಗೆ ಕಾರಣವಾಗಬಹುದು ಎಂದಿದ್ದಾರೆ.
ಕೇಕ್ ಅಂದ್ರೆ ದೊಡ್ಡವರಿಂದ ಹಿಡಿದು ಚಿಕ್ಕಮಕ್ಕಳಿಗೂ ಅಚ್ಚುಮೆಚ್ಚು. ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವದಿಂದ ಹಿಡಿದು ಯಾವುದೇ ಪಾರ್ಟಿ ಇದ್ದರೂ ಕೇಕ್ ಬೇಕೇ ಬೇಕು. ಆದ್ರೆ ಇವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಕಳೆದ ವರ್ಷ ನಡೆದ ಪರೀಕ್ಷೆ ವೇಳೆ ಕೆಲವು ಕೇಕ್ ಸ್ಯಾಂಪಲ್ಸ್ ಅನ್ ಸೇಫ್ ಆಗಿರೋದು ಬಯಲಾಗಿತ್ತು. ಹೀಗಾಗಿ ಈ ಬಾರಿಯೂ ಆಹಾರ ಇಲಾಖೆ ಈ ವೆರೈಟಿ ಕೇಕ್ಗಳ ಮೇಲೆ ಕಣ್ಣಿಟ್ಟಿದೆ. ಕೇಕ್ಗಳ ತಯಾರಿ ವೇಳೆ ರಾಸಾಯನಿಕಯುಕ್ತ ಬಣ್ಣಗಳ ಬಳಕೆ ತಡೆಗೆ ಕ್ರಮಕ್ಕೆ ಮುಂದಾಗಿದೆ.
ಯಾವೆಲ್ಲ ರೋಗಗಳು ಬರಬಹುದು?
1) ಅಲರ್ಜಿ, ಅಸ್ತಮಾ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತಲೆನೋವು
2) ಅಲರ್ಜಿ, ಮಕ್ಕಳಲ್ಲಿ ಹೈಪರ್ ಆ್ಯಕ್ಟಿವಿಟಿ, ಕ್ರೋಮೋಸೋಮ್ ಡ್ಯಾಮೇಜ್, ಥೈರಾಯ್ಡ್ ಸಮಸ್ಯೆ, ಆನ್‌ಸೈಟಿ ಸಮಸ್ಯೆ
3) ಮಕ್ಕಳ ವರ್ತನೆಯಲ್ಲಿ ಬದಲಾವಣೆ, ಅಲರ್ಜಿ, ಅಸ್ತಮಾ ಸಮಸ್ಯೆ ಸಾಧ್ಯತೆ
4) ಸ್ಕಿನ್ ರಾಶಸ್, ಶ್ವಾಸಕೋಶದ ಸಮಸ್ಯೆ, ಮೈಗ್ರೇನ್, ಡಿಪ್ರೆಶನ್, ದೃಷ್ಟಿ ಸಂಬಂಧಿತ ಸಮಸ್ಯೆ, ನಿದ್ರಾಹೀನತೆ , ಗ್ಯಾಸ್ಟ್ರಿಕ್ ಸಮಸ್ಯೆ,
5) ಹೈಪರ್ ಸೆನ್ಸಿಟಿವಿಟಿ, ಚರ್ಮದ ಊತ, ಉಸಿರಾಟದ ಸಮಸ್ಯೆ








