ಕೋಲಾರ : ಪೋಷಕರೇ ಎಚ್ಚರ, ಪೇಂಟ್ ನಲ್ಲಿ ಮಿಕ್ಸ್ ಮಾಡುವ ಥಿನ್ನರ್ ಕುಡಿದು 3 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಪೂಜಾರಹಳ್ಳಿಯಲ್ಲಿ ಥಿನ್ನರ್ ಕುಡಿದು 3 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ. 2 ದಿನಗಳ ಹಿಂದೆ
ಕುಡಿಯುವ ನೀರು ಎಂದು ಭಾವಿಸಿ ಥಿನ್ನರ್ ಕುಡಿದು ಅಸ್ವಸ್ಥಗೊಂಡಿದ್ದ ಜಾನುಳನ್ನು ಬೆಂಗಳೂರಿನ ಇಂದಿರಾಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಿಸದೇ ಇಂದು ಜಾನ್ಸಿ ಅಲಿಯಾಸ್ ಜಾನು ಮೃತಪಟ್ಟಿದ್ದಾಳೆ. ಮುಳಬಾಗಿಲು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








