ಬೆಂಗಳೂರು : ರೇಣುಕಾಸ್ವಾಮಿ ಕೊಲೆಯ ಪ್ರಕರಣದಲ್ಲಿ ಸದ್ಯ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾರೆ. ಇಂದು ಪತ್ನಿ ವಿಜಯಲಕ್ಷ್ಮಿ ಹಾಗು ಸಹೋದರ ದಿನಕರ ತೂಗುದೀಪ ಜೈಲಿಗೆ ಭೇಟಿ ನೀಡಿದರು.
ಹೌದು ಜೈಲಿಗೆ ಇಂದು ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪ್ ನಟ ದರ್ಶನ್ ಅವರನ್ನು ಭೇಟಿಯಾದರು, ಈ ವೇಳೆ ಹೊರಗಡೆ ನಡೆಯುತ್ತಿರುವ ಸ್ಟಾರ್ ವಾರ್ ಬಗ್ಗೆ ವಿಜಯಲಕ್ಷ್ಮಿ ದರ್ಶನ್ ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಡೆವಿಲ್ ಸಿನಿಮಾದ ಬಗ್ಗೆ ಕೂಡ ದರ್ಶನ್ಗೆ ವಿಜಯಲಕ್ಷ್ಮಿ ಮಾಹಿತಿ ನೀಡಿದ್ದಾರೆ ಸುಮಾರು ಅರ್ಧ ಗಂಟೆ ಬದಿಯ ಜೊತೆ ವಿಜಯಲಕ್ಷ್ಮಿ ಚರ್ಚಿಸಿ ತೆರಳಿದ್ದಾರೆ ಎಂದು ತಿಳಿದುಬಂದಿದೆ.
ಸುದೀಪ್ ವಿಜಯಲಕ್ಷ್ಮಿ ಮಧ್ಯ ವಾರ್!
ಕಿಚ್ಚ ಸುದೀಪ್ ಮತ್ತು ವಿಜಯಲಕ್ಷ್ಮೀ ನಡುವಿನ ವಿವಾದ ತಾರಕಕ್ಕೇರಿದೆ. ದರ್ಶನ್ ಅಭಿಮಾನಿಗಳನ್ನು ಗುರಿಯಾಗಿಸಿ ಸುದೀಪ್ ಹೇಳಿಕೆ ನೀಡಿದ್ದಾರೆಂದು ಭಾವಿಸಿದ ವಿಜಯಲಕ್ಷ್ಮೀ ತಿರುಗೇಟು ನೀಡಿದ್ದರು. ದರ್ಶನ್ ಜೈಲಿನಲ್ಲಿರುವಾಗ ಅವರ ಪರ ವಿಜಯಲಕ್ಷ್ಮೀ ಧ್ವನಿ ಎತ್ತಿದ್ದಾರೆ. ದರ್ಶನ್ ಜೈಲಿನಲ್ಲಿರೋ ಈ ಸಂದರ್ಭದಲ್ಲಿ ಅವರು ‘ಡೆವಿಲ್’ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಈ ಮಧ್ಯೆ ಅವರು ಸಾರ್ವಜನಿಕವಾಗಿ ಸುದೀಪ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಅವರು ಈ ರೀತಿ ಹೇಳೋದಕ್ಕೆ ಕಾರಣ ಕೂಡ ಎನ್ನಲಾಗುತ್ತಿದೆ.
ವಿಜಯಲಕ್ಷ್ಮಿ ತಾಳ್ಮೆ ಕಟ್ಟೆ ಒಡೆದು ಸುದೀಪ್ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಗಂಡ ಹೆಂಡತಿ ಜಗಳ ಆಡಿಕೊಂಡು, ಮದ್ಯಸ್ಥಿಕೆ ವಹಿಸಬೇಕು ಅಂತ ಒಬ್ಬರ ನನ್ನ ಬಳಿ ಬಂದರು. ನಾನು ಮಧ್ಯಸ್ಥಿಕೆ ವಹಿಸಿದೆ. ಅವರಿಬ್ಬರು ಒಂದಾದರು. ಮಧ್ಯಸ್ಥಿಕೆ ವಹಿಸಿದವರು ಗೂಬೆ ಆದರು’ ಎಂದಿದ್ದರು ಸುದೀಪ್. ಇದು ವಿಜುಲಕ್ಷ್ಮೀ ಕಿವಿಗೆ ಬಿದ್ದಿತ್ತು ಎನ್ನಲಾಗಿದೆ.
ಸುದೀಪ್ ಬರ್ತ್ಡೇ ಹಿಂದಿನ ದಿನ ಮಧ್ಯ ರಾತ್ರಿ ದರ್ಶನ್ ಫ್ಯಾನ್ಸ್ಗೆ ಸುದೀಪ್ ಪರೋಕ್ಷವಾಗಿ ಟಕ್ಕರ್ ಕೊಟ್ಟಿದ್ದರು ಸುದೀಪ್. ಹೀಗೆ ಸುದೀಪ್ ಪದೇ ಪದೇ ದರ್ಶನ್ ಹಾಗೂ ಅವ್ರ ಫ್ಯಾನ್ಸ್ನ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ವಿಜಯಲಕ್ಷ್ಮೀ ಅವರಿಗೆ ಅನಿಸಿದೆ. ಹೀಗಾಗಿ, ಸುದೀಪ್ ಅವರು ದರ್ಶನ್ ಬಗ್ಗೆ ಮಾತನಾಡದಂತೆ ಸೂಚಿಸುವಂತೆ ಹಿರಿಯ ನಿರ್ಮಾಪಕರ ಬಳಿಕ ವಿಜಯಲಕ್ಷ್ಮೀ ಕೇಳಿಕೊಂಡಿದ್ದರಂತೆ. ಈ ವಿಚಾರವಾಗಿ ಸುದೀಪ್ ಜೊತೆ ನಿರ್ಮಾಪಕರು ಮಾತುಕತೆ ನಡೆಸಿದ್ದರು.








