ಕೊಡಗು : ಕೊಡಗು ಜಿಲ್ಲೆಯ ಯಲ್ಲಿ ಅರಣ್ಯ ಸಿಬ್ಬಂದಿಯಿಂದಲೇ ಮರಗಳ್ಳತನ ನಡೆದಿದ್ದು, ಕೊಡಗಿನ ಎಡೆವಾರೆ ಮೀಸಲು ಅರಣ್ಯದಲ್ಲಿ 27 ತೇಗದ ಮರಗಳ ಕಳ್ಳತನ ಮಾಡಿದ್ದಾರೆ.
RRT ಸಿಬ್ಬಂದಿ ವಿನೋದ್ ಎಂಬಾತನಿಂದ ಮರಗಳ್ಳತನ ನಡೆದಿದೆ. ಸೋಮವಾರಪೇಟೆ ತಾಲೂಕಿನ ಕಾಜೂರು ಬಳಿ ಮರಗಳ್ಳತನ ನಡೆದಿದೆ. ಕತ್ತರಿಸಿದ್ದ 7 ತೇಗದ ಮರ, 1 ಪಿಕಪ್ ವಾಹನ ವಶಕ್ಕೆ ಪಡೆದಿದ್ದಾರೆ. ಈ ಗ್ಯಾಂಗ್ ಮೀಸಲು ಅರಣ್ಯದಲ್ಲಿ 7 ತೇಗದ ಮರ ಕಡಿದು ಉರುಳಿಸಿದ್ದರು.
ಗಸ್ತು ಸಂದರ್ಭದಲ್ಲಿ ಅರಣ್ಯ ಸಿಬ್ಬಂದಿಗೆ ಮರಗಳ್ಳತನ ಕಾಣಿಸಿದೆ. ಮರಗಳ್ಳರಿಗಾಗಿ ಕಳೆದ 4 ದಿನಗಳಗಿಂದ ಅರಣ್ಯ ಸಿಬ್ಬಂದಿ ಕಾದು ಕುಳಿತಿತ್ತು. ಡಿಸೆಂಬರ್ 12 ರಂದು ಮಧ್ಯರಾತ್ರಿ ಅರಣ್ಯಕ್ಕೆ ಮರಗಳ್ಳರು ಬಂದಿದ್ದಾರೆ. ಮರಗಳ್ಳರನ್ನು ಹಿಡಿಯುವ ಸಂದರ್ಭದಲ್ಲಿ ಘರ್ದಾಣೆಯಾಗಿತ್ತು. ಗಾಳಿಯಲ್ಲೋ ಅಧಿಕಾರಿ ಚಂದ್ರಶೇಖರ 2 ಸುಟ್ಟು ಗುಂಡು ಹಾರಿಸಿದ್ದರು. ಲೋಡರ್ ಸಂತೋಷ್ ಎಂಬತನನ್ನ ಅರೆಸ್ಟ್ ಮಾಡಿದ್ದು ನಾಲ್ವರು ಪರಾರಿಯಾಗಿದ್ದಾರೆ.
ಬಂಧಿತ ಸಂತೋಷನನ್ನ ವಿಚಾರಣೆ ವೇಳೆ ವಿನೋದ್ ಪಾತ್ರ ಬಯಲಾಗಿದೆ. ಮರಗಳ್ಳರಿಗಾಗಿ RRT ಸಿಬ್ಬಂದಿ ವಿನೋದ್ ಸಹಕಾರ ನೀಡುತ್ತಿದ್ದ. ಅರಣ್ಯ ಬಳಿ ಬೈಕ್ ನಲ್ಲಿ ಓಡಾಡಿ ಮಾಹಿತಿ ನೀಡುತ್ತಿದ್ದ ಆರೋಪ ಕೇಳಿಬಂದಿದೆ. ಇದೀಗ ಮರಗಳ್ಳತನ ಬಯಲಾಗುತ್ತಿದ್ದಂತೆ ವಿನೋದ್ ತಲೆ ಮರೆಸಿಕೊಂಡಿದ್ದಾನೆ. RRT ಸಿಬ್ಬಂದಿ ವಿನೋದ್ ಸೇರಿ 6 ಜನರ ವಿರುದ್ಧ ‘FIR’ ದಾಖಲಾಗಿದೆ.








