ಬೆಂಗಳೂರು : ವರ್ಗಾವಣೆಯ ನಿರೀಕ್ಷೆಯಲ್ಲಿ ಈ ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕಿದ್ದು, 2026ನೇ ಸಾಲಿನ ವರ್ಗಾವಣೆಯ ವೇಳಾಪಟ್ಟಿ ಪ್ರಕಟಿಸಲಾಗಿದೆ.
2026ನೇ ಸಾಲಿನ ವರ್ಗಾವಣೆಯನ್ನು ಉಲ್ಲೇಖಿತ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ವೈದ್ಯಾಧಿಕಾರಿಗಳು ಮತ್ತು ಇತರೆ ಸಿಬ್ಬಂದಿಯ ವರ್ಗಾವಣೆ ನಿಯಂತ್ರಣ) ಕಾಯ್ದೆ 2011 ಹಾಗೂ ತಿದ್ದುಪಡಿ ಕಾಯ್ದೆ 2025 ಉಲ್ಲೇಖಿತ(2)ರಲ್ಲಿ ರಚಿಸಲಾಗಿರುವ ನಿಯಮಾವಳಿಗಳನ್ನು ಹಾಗೂ ಉಲ್ಲೇಖ(3)ರ ಸರ್ಕಾರದ ಆದೇಶದಂತೆ ವರ್ಗಾವಣೆಯನ್ನು ನಡೆಸಲು ಆದೇಶಿಸಲಾಗಿದೆ.
ಅದರಂತೆ, 2026ನೇ ಸಾಲಿನಲ್ಲಿ ವರ್ಗಾವಣೆ ಕಾಯ್ದೆ ಮತ್ತು ನಿಯಮ 6(1)ರನ್ವಯ ಸಾರ್ವಜನಿಕ ಹಿತದೃಷ್ಟಿಯಿಂದ ಕನಿಷ್ಠ ಸೇವಾವಧಿ ಪೂರೈಸಿರುವ ಮತ್ತು ನಿಯಮ 6 (3) ರನ್ವಯ ವಿಶೇಷ ವರ್ಗದ ಕೋರಿಕೆ ವರ್ಗಾವಣೆಗೆ ಸಂಬಂಧಿಸಿದಂತೆ ಎ, ಬಿ, ಸಿ ಮತ್ತು ಡಿ ವೃಂದದ ಅಧಿಕಾರಿ/ಸಿಬ್ಬಂದಿಗಳ ಮಾಹಿತಿಯನ್ನು ಸಲ್ಲಿಸುವ ವರ್ಗಾವಣೆಯ ವೇಳಾಪಟ್ಟಿಯನ್ನು ಉಲ್ಲೇಖ(3) ಸರ್ಕಾರದ ಆದೇಶದಲ್ಲಿ ಸೂಚಿಸಿರುವಂತೆ ಈ ಕೆಳಕಂಡ ದಿನಾಂಕಗಳಿಗೆ ನಿಗದಿಪಡಿಸಲಾಗಿದೆ.









