ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಸಿಕ್ಕಿದ್ದು, ರಾಜ್ಯದಲ್ಲಿ ಹಳೇ ಪಿಂಚಣಿ ಯೋಜನೆ (OPS) ಮರು ಜಾರಿ ಸಂಬಂಧ ಅಂತಿಮ ವರದಿಯನ್ನು ಒಂದು ತಿಂಗಳಲ್ಲಿ ಸಲ್ಲಿಸಲಾಗುವುದು ಎಂದು ರಾಜ್ಯ ಸರ್ಕಾರದ ಅಧ್ಯಯನ ಸಮಿತಿ ಅಧ್ಯಕ್ಷೆ ಹಾಗೂ ಅಭಿವೃದ್ಧಿ ಆಯುಕ್ತ ಉಮಾ ಮಹದೇವನ್ ಭರವಸೆ ನೀಡಿದ್ದಾರೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ನೇತೃತ್ವದ ನಿಯೋಗದ ಜತೆಗೆ ವಿಧಾನಸೌಧದಲ್ಲಿ ಸೋಮವಾರ ಅವರು ಚರ್ಚೆ ನಡೆಸಿದರು.
ದಿನಾಂಕ: 22-12-2025ರ ಸರ್ಕಾರದ ಎನ್ಪಿಎಸ್ ಅಧ್ಯಯನ ಸಮಿತಿ ಸಭೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಈ ಮುಂದಿನ ಮಾಹಿತಿಗಳನ್ನು ಎನ್.ಪಿ.ಎಸ್. ರದ್ದುಗೊಳಿಸಿ ಒ.ಪಿ.ಎಸ್. ಜಾರಿಗೊಳಿಸಲು ಸಲ್ಲಿಸಲಾಗಿದೆ.
ಪೂರಕ ಅಂಶಗಳು
ಭಾರತ ಸರ್ಕಾರ NPS ಯೋಜನೆಯನ್ನು 01-04-2004ರ ಜಾರಿಗೊಳಿಸಿರುತ್ತದೆ.
ಕರ್ನಾಟಕ ಸರ್ಕಾರ 01-04-2006ರ ನಂತರ ಜಾರಿಗೊಳಿಸಿದೆ.
ಪಶ್ಚಿಮ ಬಂಗಾಳ ರಾಜ್ಯದಲ್ಲಿ ಇದುವರೆವಿಗೂ ಈ ಯೋಜನೆ ಜಾರಿಗೆ ಬಂದಿರುವುದಿಲ್ಲ.
ಪಶ್ಚಿಮ ಬಂಗಾಳ ರಾಜ್ಯಗಳು ಕೇಂದ್ರ ಸೇವೆಗಳಿಗೆ ಮಾತ್ರ ಯೋಜನೆಯನ್ನೇ ಮುಂದುವರೆಸಿರುತ್ತವೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು NPS ಬದಲಾಗಿ CPS [Contributary Pension Scheme) ಆಗಿ ಪರಿವರ್ತನೆ ಆಗಿದೆ ដ. 4 [ Guarantee Pension Scheme]
ಭಾರತ ಸರ್ಕಾರ 2023ರಲ್ಲಿ ನೂತನ ಪಿಂಚಣಿ ಯೋಜನೆಯನ್ನು ರಾಷ್ಟ್ರೀಯ ಪಿಂಚಣಿ ಯೋಜನೆಯೆಂದು ಮರು ಪದನಾಮೀಕರಿಸಿರುತ್ತದೆ.
ಎನ್ಪಿಎಸ್ ಯೋಜನೆಯಲ್ಲಿ ನಮ್ಮ ರಾಜ್ಯ ಸರ್ಕಾರಿ ನೌಕರರು ತಮ್ಮ ಮೂಲವೇತನ ಮತ್ತು ಡಿಎ ಒಟ್ಟು ಮೌಲ್ಯದಲ್ಲಿ ಶೇಕಡಾ 10 ರಷ್ಟು ವಂತಿಗೆಯನ್ನು ಹಾಗೂ ಸರ್ಕಾರ ಶೇಕಡಾ 14 ರಷ್ಟು
ವಂತಿಗೆಯನ್ನು ಪಾವತಿಸುತ್ತದೆ. ಇದರಿಂದ ಒಟ್ಟು 24% ವಂತಿಗೆ ನೌಕರರ Non-withdrawable ಖಾತೆಗೆ ಜಮಾ ಆಗುತ್ತದೆ.
‘ಎನ್ಪಿಎಸ್ ಖಾತೆಗೆ ಜಮೆಯಾಗುವ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗುತ್ತಿದ್ದು, ಹೂಡಿಕೆಯಾಗುವ ಹಣಕ್ಕೆ ಯಾವುದೇ ನಿರ್ದಿಷ್ಟ ಭದ್ರತೆಯಿರುವುದಿಲ್ಲ. ಹಾಗೂ ಮಾರುಕಟ್ಟೆಯ ಏರಿಳಿತಗಳಿಗೆ ಒಳಪಟ್ಟಿರುತ್ತದೆ.
ಕಡಿಮೆ ಸೇವಾವಧಿಯಿರುವ ಹಾಗೂ ಸಿ ಮತ್ತು ಡಿ ದರ್ಜೆಯ ನೌಕರರಿಗೆ ಈ ಯೋಜನೆಯಿಂದ ಅತೀ ಕಡಿಮೆ ಮಾಸಿಕ ನಿವೃತ್ತಿ ವೇತನ ದೊರೆಯುತ್ತಿದೆ.
ಎನ್ಪಿಎಸ್ ಯೋಜನೆಯಿಂದ ಸರ್ಕಾರಿ ನೌಕರನ ನಿವೃತ್ತಿ ನಂತರದ ಸಾಮಾಜಿಕ ಹಾಗೂ ಆರ್ಥಿಕ ನಿರ್ವಹಣೆಗೆ ನಿರ್ದಿಷ್ಟ ಭದ್ರತೆ ಇರುವುದಿಲ್ಲ.
ಎನ್ಪಿಎಸ್ ಯೋಜನೆಯಲ್ಲಿ ಸರ್ಕಾರಿ ನೌಕರರಿಗೆ ಯಾವುದೇ ಆರ್ಥಿಕ ಮತ್ತು ಸಾಮಾಜಿಕ ಭದ್ರತೆ ಇಲ್ಲದೆ ಇರುವುದರಿಂದ ದೇಶದಾದ್ಯಂತ ಈ ಯೋಜನೆಯನ್ನು ರದ್ದುಪಡಿಸಿ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವಂತೆ ಹೋರಾಟಗಳು ನಿರಂತರವಾಗಿ ನಡೆಯುತ್ತಿವೆ.
ಕೆಳಕಂಡ ರಾಜ್ಯಗಳು ಎನ್ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನು ನೌಕರರ ಹೋರಾಟಕ್ಕೆ ಮಣಿದು ಮರು ಜಾರಿಗೊಳಿಸಿರುತ್ತವೆ.









