ಬೆಂಗಳೂರು : ನಕಲಿ ಸ್ಟ್ಯಾಂಪ್ ಪೇಪರ್ ಹಗರಣದಲ್ಲಿ ಶ್ರೀನಿವಾಸ್ ನಾಯ್ಡು CBI ವಶಕ್ಕೆ ಪಡೆದುಕೊಂಡಿದೆ. ದಿ.ಆದಿಕೇಶವುಲು ನಾಯ್ಡು ಪುತ್ರ ಶ್ರೀನಿವಾಸ್ ನಾಯ್ಡುಯನ್ನು ಸಿಬಿಐ ವಶಕ್ಕೆ ಪಡೆದುಕೊಂಡಿದ್ದಾರೆ. ಟಿಟಿಡಿ ಮಾಜಿ ಅಧ್ಯಕ್ಷ, ಮಾಜಿ ಸಂಸದ ಆದಿಕೇಶವುಲು ಪುತ್ರನನ್ನು ಇದೀಗ CBI ವಶಕ್ಕೆ ಪಡೆದುಕೊಂಡಿದ್ದಾರೆ.
ಇದೆ ಪ್ರಕರಣದಲ್ಲಿ ಸಾಕ್ಷಿ ನಾಶ ಆರೋಪದಲ್ಲಿ ಡಿವೈಎಸ್ಪಿ ಮೋಹನ್ ಸಹ ಸಿಬಿಐ ವಶಕೆ ಪಡೆದುಕೊಂಡಿದ್ದಾರೆ. ನಕಲಿ ಸ್ಟ್ಯಾಂಪ್ ಪೇಪರ್ ಮತ್ತು ರಘುನಾಥ್ ಕೊಲೆ ಕೇಸ್ ನಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆದಿಕೇಶವುಲು ಪುತ್ರಿ ಕಲ್ಪಜಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 2019 ರಲ್ಲಿ ಗೆಸ್ಟ್ ಹೌಸ್ ನಲ್ಲಿ ರಘುನಾಥ್ ಮೃತಪಟ್ಟಿದ್ದರು. HAL ಠಾಣಾ ವ್ಯಾಪ್ತಿಯಲ್ಲಿ ನೇಣುಬಿಗಿದು ಸ್ಥಿತಿಯಲ್ಲಿ ಪತ್ತೆ ಆಗಿದ್ದ. ಸಾವಿಗೂ ಮುನ್ನ ಆಸ್ತಿ ತಮ್ಮ ಹೆಸರಿಗೆ ಮಾರಿದ ರೀತಿ ದಾಖಲೆ ಸೃಷ್ಟಿ ಮಾಡಿದ್ದಾರೆ.
ಆಸ್ತಿಗಾಗಿ ಕೊಲೆ ಎಂದು HAL ಠಾಣೆಗೆ ದೂರು ನಿದ್ದಿದ್ದ ರಘುನಾಥ್ ಪತ್ನಿ ಪ್ರಕರಣದ ತನಿಖೆಯನ್ನು SIT ಗೆ ನೀಡಲಾಗಿತ್ತು. ನಂತರ ಈ ಪ್ರಕರಣ ಸಿಬಿಐಗೆ ನೀಡಿ ಹೈಕೋರ್ಟ್ ಅದೇಶಿಸಿತ್ತು. ಆದಿಕೇಶವುಲು ಮಕ್ಕಳ ವಿರುದ್ಧ ಛಾಪಾ ಕಾಗದ ಸೃಷ್ಟಿ ಆರೋಪ ಕೇಳಿಬಂದಿದೆ. ಸಾಕ್ಷಿ ನಾಶ ಆರೋಪದ ಮೇಲೆ ಡಿವೈಎಸ್ಪಿ ಮೋಹನ್ ಸಹನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಾದಾಗ ಮೋಹನ್ HAL ಠಾಣಾ ಇನ್ಸ್ಪೆಕ್ಟರ್ ಆಗಿದ್ದ.








