ಬೀದರ್ : ಚೀಟಿ ಹಣ ಕೊಡದಿದ್ದಕ್ಕೆ ವ್ಯಕ್ತಿಯೊಬ್ಬ ಸೇತುವೆಯ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಬೀದರ್ ನ ಓಲ್ಡ್ ಸಿಟಿಯ ನಿವಾಸಿ ಎಂ.ಡಿ ಇನಾಯತ್ ಆತ್ಮಹತ್ಯೆಗೆ ಯತ್ನಿಸಿರುವ ವ್ಯಕ್ತಿ.
20 ಲಕ್ಷ ಚೀಟಿ ಹಣ ಕೊಡದೆ ಸಂಬಂಧೀಯೊಬ್ಬ ಸತಾಯಿಸುತ್ತಿದ್ದ. ಸೋದರ ಸಂಬಂಧಿ 5 ರಿಂದ 6 ತಿಂಗಳಿಂದ ಸತಾಯಿಸುತ್ತಿದ್ದ. ಈ ವೇಳೆ ವಿಡಿಯೋ ಮಾಡಿಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಅದೃಷ್ಟವಶಾತ್ ಅಪಾಯದಿಂದ ಇನಾಯತ್ ಪಾರಾಗಿದ್ದಾನೆ. ಈ ಕುರಿತು ಜನವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








