ಬೆಂಗಳೂರು : ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿ ಸರಣಿ ಅಪಘಾತ ಸಂಭವಿಸಿದ್ದು ಕಂಟೇನರ್ ಚಾಲಕನೊಬ್ಬ ಸಿಕ್ಕಸಿಕ್ಕ ವಾಹನೆಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಸುಮಾರು 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿಯಾಗಿದ್ದು ನಾಲ್ವರಿಗೆ ಗಂಭೀರವಾದ ಗಾಯಗಳಾಗಿವೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ಬಳಿಯ ಬೆಸ್ತಮಾನ ಹಳ್ಳಿಯಿಂದ ಚಂದಾಪುರದವರಿಗೆ ಈ ಒಂದು ಸರಣಿ ಅಪಘಾತ ಸಂಭವಿಸಿದ್ದು ಪೊಲೀಸರು 14 ಕಿಲೋಮೀಟರ್ ಹಿಂಬಾಲಿಸಿದರು ಕೂಡ ಚಾಲಕ ಕಂಟೆನರ್ ನಿಲ್ಲಿಸಿರಲಿಲ್ಲ. ಬಳಿಕ ಚಂದಾಪುರದಲ್ಲಿ ಸಾರ್ವಜನಿಕರು ಕಲ್ಲು ತೂರಿದಾಗ ಚಾಲಕ ಕಂಟೆನರ್ ನೆಲೆಸಿದ್ದಾನೆ.








