ಉತ್ತರ ಕನ್ನಡ: ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಿಎಂ ಆಗುವುದು ಶತಸಿದ್ಧ. ಆದ್ರೆ ಸಿಗುವ ಮುನ್ನ ಸಾಗುವ ದಾರಿ ಎಚ್ಚರವೆಂಬುದಾಗಿ ದೈವವಾಣಿಯನ್ನು ನುಡಿಯಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದಲ್ಲಿರುವಂತ ಜಗದೀಶ್ವರಿ ದೇವಾಲಯದ ಸನ್ನಿಧಿಯಲ್ಲಿ 5 ಬೇಡಿಕೆಯನ್ನು ಡಿಸಿಎಂ ಡಿ.ಕೆ ಶಿವಕುಮಾರ್ ಇಟ್ಟಿದ್ದಾರೆ. ಅವರು ಇರಿಸಿರುವಂತ ಐದು ಬೇಡಿಕೆಗಳಿಗೂ ಒಳ್ಳೆಯ ಮುನ್ನೂಚನೆಯನ್ನು ಜಗದೀಶ್ವರಿ ಕೊಟ್ಟಿರುವುದಾಗಿ ಹೇಳಲಾಗುತ್ತಿದೆ.
ರಾಜಕೀಯ ವಿಚಾರ ಮೂರು ಬಾರಿ, ಕೌಟುಂಬಿಕ ವಿಚಾರ ಒಂದು ಬಾರಿ, ಆಪ್ತ ಕಾರ್ಯದರ್ಶಿ ಕಾರು ಅಪಘಾತದ ಬಗ್ಗೆ ಒಮ್ಮೆ ಡಿಕೆ ಶಿವಕುಮಾರ್ ಕೇಳಿದ್ದಕ್ಕೆ ದೈವವಾಣಿ ನುಡಿಯಲಾಗಿದೆ. ಕೆಲ ಬೇಡಿಕೆಗಳಿಗೆ ಸಲಹೆ ಮತ್ತು ಮಾರ್ಗದರ್ಶನವನ್ನು ಜಗದೀಶ್ವರಿ ತಿಳಿಸಲಾಗಿದೆ ಎನ್ನಲಾಗುತ್ತಿದೆ.
ಐದು ಬೇಡಿಕೆ ಪೈಕಿ ಮುಖ್ಯಮಂತ್ರಿ ಹುದ್ದೆಯ ಬಗ್ಗೆಯೂ ಡಿ.ಕೆ ಶಿವಕುಮಾರ್ ದೈವ ನುಡಿಯನ್ನು ಕೇಳಿದ್ದಾರೆ ಎನ್ನಲಾಗುತ್ತಿದೆ. ಅದಕ್ಕೆ ಒಂದೂವರೆ ತಿಂಗಳಲ್ಲಿ ಶುಭಸುದ್ದಿ ಬರಲಿದೆ ಎಂಬುದಾಗಿ ದೈವವಾಣಿ ನುಡಿಯಲಾಗಿದೆ.
ಸಿಎಂ ಆಗುವುದು ಶತಸಿದ್ಧ, ಕೆಲ ದುಷ್ಟ ಶಕ್ತಿಗಳ ಪ್ರಭಾವದಿಂದ ಅಡ್ಡಿ ಆಗ್ತಿದೆ. ದುಷ್ಟ ಶಕ್ತಿ ನಿವಾರಣೆಗೆ ದೇವಿಗೆ ನಿತ್ಯವೂ ಪೂಜೆ ಸಲ್ಲಿಸೋದಾಗಿ ಡಿಕೆ ಶಿವಕುಮಾರ್ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಡಿಕೆ ಹೆಸರಿನಲ್ಲಿ ನಿತ್ಯ ಬೆಳಗ್ಗೆ 5ಕ್ಕೆ ವಿಶೇಷ ಪೂಜೆಯನ್ನು ಅರ್ಚಕರು ಮಾಡ್ತಿದ್ದಾರೆ. ಅಲ್ಲದೇ ನಿತ್ಯ ಪೂಜೆ ಮಾಡಿದಾಗಲೂ ಅರ್ಚಕರು ಪ್ರಸಾದ ಕೇಳುತ್ತಿದ್ದಾರೆ ಎಂಬುದಾಗಿ ಹೇಳಲಾಗುತ್ತಿದೆ.
ದೇವಿಯ ಸಾನಿಧ್ಯಕ್ಕೆ ಬರುವ ಮುನ್ನ ಆಪ್ತ ಕಾರ್ಯದರ್ಶಿಯ ಕಾರು ಅಪಘಾತದ ಬಗ್ಗೆಯೂ ಡಿ.ಕೆ ಶಿವಕುಮಾರ್ ಕೇಳಿದ್ದಾರೆ ಎನ್ನಲಾಗುತ್ತಿದೆ. ದುಷ್ಟ ಶಕ್ತಿಗಳು ನಿಮ್ಮನ್ನ ಕಟ್ಟಿಹಾಕಲು ನಡೆದ ಯತ್ನ ಎಂಬುದಾಗಿ ದೈವವಾಣಿ ಹೇಳಿದೆ ಎಂದು ಹೇಳಲಾಗುತ್ತಿದೆ.
ಸಿಎಂ ಆಗುವವರೆಗೂ ಪ್ರತಿ ಹೆಜ್ಜೆಯನ್ನೂ ಯೋಚನೆ ಮಾಡಿ ಇಡುವಂತೆ ಜಗದೀಶ್ವರಿ ಸಲಹೆ ಮಾಡಿದೆ. ಸಿಎಂ ಪಟ್ಟ ಸಿಗುತ್ತೆ. ಆದ್ರೆ ಸಿಗುವ ಮುನ್ನ ಸಾಗುವ ದಾರಿ ಎಚ್ಚರವೆಂದು ದೈವವಾಣಿ ನುಡಿದಿದೆ ಎಂಬುದಾಗಿ ತಿಳಿದು ಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಆಂದ್ಲೆ ಗ್ರಾಮದ ಜಗದೀಶ್ವರಿ ದೇಗುಲಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಭೇಟಿ ನೀಡಿದ ವೇಳೆಯಲ್ಲಿ ಈ ದೈವವಾಣಿ ನುಡಿದಿರುವುದಾಗಿ ಹೇಳಲಾಗುತ್ತಿದೆ.
BREAKING: ಬೆಂಗಳೂರಲ್ಲಿ ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ: ಅರ್ಧಗಂಟೆಯಿಂದ ನಿಂತಲ್ಲೇ ನಿಂತ ರೈಲು








