ಬೆಳಗಾವಿ : ರಾಜಕೀಯ ಒತ್ತಡಕ್ಕೆ ಅಮಾನತು ಮಾಡಿದ್ದಾರೆ ಎಂದು ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮುಖ್ಯ ಸೆಲ್ಫಿ ವಿಡಿಯೋ ಮಾಡಿದ್ದಾರೆ. ಹರಗಾಪುರದ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕಿ ಸುರೇಖಾ ಬಾಯಣ್ಣವರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದಲ್ಲಿ ಇವರು ಮುಖ್ಯ ಶಿಕ್ಷಕಿಯಾಗಿದ್ದರು.
ಸುರೇಖಾ ಅವರು ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ನೇಮಕ ಮಂದೂಡಿದ್ದಾರೆ. ಪವನ್ ಪಾಟೀಲ್ ಎಂಬಾತ ಅಕ್ರಮ ಚುನಾವಣೆ ನಡೆಸುತ್ತಿದ್ದ ಎಂದು ಆರೋಪಿಸಿದ್ದಾರೆ. ಇದನ್ನು ಗಮನಿಸಿ ಆ ದಿನ ನಾನು ಚುನಾವಣೆ ಮುಂದೂಡಿದ್ದೆ ಎಂದು ಸೆಲ್ಫಿ ವಿಡಿಯೋ ದಲ್ಲಿ ತಿಳಿಸಿದ್ದಾರೆ. ಇದರಿಂದ ಪವನ್ ತಮ್ಮ ಅವರು ಅಧ್ಯಕ್ಷ ಆಗಲಿಲ್ಲ ಅಂತ ದ್ವೇಷ ಕಾರುತ್ತಿದ್ದಾನೆ. ಸಚಿವ ಸತೀಶ್ ಜಾರಕಿಹೊಳಿ ಹೆಸರು ಹೇಳಿ ಬಿಇಓ ಮೇಲೆ ಒತ್ತಡ ತಂದಿದ್ದಾನೆ ಎಂದು ಆರೋಪಿಸಿದ್ದಾರೆ
ಸೆಲ್ಫಿ ವಿಡಿಯೋದಲ್ಲಿ ಮಾನ್ಯ ಶಿಕ್ಷಕರಲ್ಲಿ ನಾನು ವಿನ್ಯಪೂರ್ವಕವಾಗಿ ಬೇಡಿಕೊಳ್ಳುತ್ತೇನೆ ಹುಕ್ಕೇರಿ ತಾಲೂಕಿನ ಹರಗಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಯಾದ ಸುರೇಖಾ ಬಾಯಣ್ಣನವರ ಆದ ನಾನು ಹೆಚ್‍ಡಿಎಂಸಿ ಹೊಸ ರಚನೆಯಲ್ಲಿ ಹಲವು ಕಾನೂನು ಪ್ರಕಾರ ನಿಮಿತವಾಗಿ ಕೆಲಸ ಮಾಡಿರುತ್ತೇನೆ ಆದರೆ ಕೆಲವು ಅಭಿಪ್ರಾಯಗಳು ಬೇರೆ ಆಗಿದ್ದರಿಂದ ಎಸ್ ಡಿ ಎಮ್ ಸಿ ಅಧ್ಯಕ್ಷ ನೇಮಕ ಮುಂದೂಡಲು ಅವಕಾಶವಿರುತ್ತದೆ ಹಾಗಾಗಿ ಚುನಾವಣೆ ಮುಂದೂಡಿದ್ದೇನೆ. ಪವನ್ ಪಾಟೀಲ್ ಅಕ್ರಮ ಚುನಾವಣೆ ನಡೆಸುತ್ತಿದ್ದ ಇದನ್ನು ಗಮನಿಸಿ ಆ ದಿನ ಚುನಾವಣೆ ಮುಂದೂಡಿದ್ದೇನೆ.
ಒಂದು ಕೆಟ್ಟ ಹುಳುವಿನ ಪ್ರಯತ್ನದಿಂದ ಹಾಗೂ ರಾಜಕೀಯ ಒತ್ತಡದಿಂದ ನನ್ನ ಮೇಲೆ ಸುಳ್ಳು ಆರೋಪಗಳನ್ನು ಹೋರಿಸಿ ಹುಕ್ಕೇರಿ ತಾಲೂಕಿನ ಕ್ಷೇತ್ರ ರಕ್ಷಣಾಧಿಕಾರಿಗಳಾದ ಪ್ರಭಾವತಿ ಪಾಟೀಲ್ ನನ್ನನ್ನು ಅಮಾನತು ಮಾಡಿದ್ದಾರೆ. ನನ್ನನ್ನು ಸಸ್ಪೆಂಡ್ ಮಾಡಿದ್ದಾರೆ ದಯವಿಟ್ಟು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ತಾವುಗಳು ನನಗೆ ನ್ಯಾಯ ಒದಗಿಸಬೇಕು ಅಂತ ಹೇಳಿ ಕೇಳಿಕೊಳ್ಳುತ್ತೇನೆ. ಒಂದು ವೇಳೆ ನ್ಯಾಯ ಸಿಗದಿದ್ದರೆ ಬದುಕುವಂತಹ ಇಚ್ಛೆ ನನಗಿಲ್ಲ. ಪ್ರಾಮಾಣಿಕವಾಗಿ 36 ವರ್ಷ ಸೇವೆ ಸಲ್ಲಿಸಿದ್ದೇನೆ ಮಕ್ಕಳೇ ನನ್ನ ದೇವರು ಮಕ್ಕಳೇ ನನ್ನ ಅನ್ನದಾತರು. ಇಲ್ಲಿಯವರೆಗೆ ಮಕ್ಕಳಿಗಾಗಿ ದುಡಿದಿದ್ದೇನೆ ದಯವಿಟ್ಟು ನನಗೆ ನ್ಯಾಯ ದೊರಕಿಸಿಕೊಡಿ ಎಂದು ಸೆಲ್ಫಿ ವಿಡಿಯೋ ಮಾಡಿದ್ದಾರೆ.








