ರಾಷ್ಟ್ರದ ನಾಗರಿಕ ನೋಂದಣಿ ಜನನ ಮತ್ತು ಮರಣ ಅಧಿನಿಯಮ 1960 ರನ್ವಯ ಕರ್ನಾಟಕ ಜನನ ಮತ್ತು ಮರಣ ನೋಂದಣಿ 1970 ಮತ್ತು ಪುನರ್ ರಚಿತ ಕರ್ನಾಟಕ ಜನನ ಮರಣ ನೋಂದಣಿ ಕಾಯ್ದೆ ನಿಯಮ 1990 ರ ರನ್ವಯ ಜನನ ಮತ್ತು ಮರಣ ನೋಂದಣಿ ಕಡ್ಡಾಯವಾಗಿದ್ದು, ಪ್ರಸ್ತುತ ಜನನ ಮತ್ತು ಮರಣ ನೋಂದಣಿಯನ್ನು 2015 ರ ಏಪ್ರಿಲ್, 01 ರಿಂದ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಇ-ಜನ್ಮ ತಂತ್ರಾಂಶದ ಮೂಲಕ ಆನ್ಲೈಣನ್ ನೋಂದಣಿಯನ್ನು ನಿರ್ವಹಿಸಲಾಗುತ್ತಿದ್ದು, ಅದರಂತೆ ಜನನ ಮರಣ ನೋಂದಣಿ(ತಿದ್ದುಪಡಿ-2023) ಅಧಿನಿಯಮ 1960, ಕರ್ನಾಟಕ ಜನನ ಮರಣ ನೋಂದಣಿ (ತಿದ್ದುಪಡಿ 2024) ರಂತೆ ನಿಯಮಗಳಲ್ಲಿ ಕೆಲವು ಮಾರ್ಪಾಡಾಗಿದ್ದು, ಅದರಂತೆ ನಿಯಮಗಳನ್ನು ಪಾಲಿಸಬೇಕಾಗಿ ಕೋರಿದೆ.
ಜನನ ಮರಣ ನೋಂದಣಿಯಲ್ಲಿ ಕಡ್ಡಾಯವಾಗಿ ಅನುಸರಿಸಬೇಕಾದ ಪ್ರಮುಖ ಅಂಶಗಳು; ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಮೂನೆ-1 ರ ಕಾಲಂ 4 ಮತ್ತು 5 ರಲ್ಲಿ ತಂದೆ ತಾಯಿಗಳ ಆಧಾರ್ ಸಂಖ್ಯೆ ಲಭ್ಯವಿಲ್ಲದಿದ್ದಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನಮೂದಿಸುವುದು.
ಮರಣ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ನಮೂನೆ-2 ರಲ್ಲಿ ಕಾಲಂ 6 ರಲ್ಲಿ ಆಧಾರ್ ಸಂಖ್ಯೆ, ಜನನದ ದಿನಾಂಕ ವಯಸ್ಸು ಲಭ್ಯವಿಲ್ಲದಿದ್ದಲ್ಲಿ ಮೊಬೈಲ್ ನಂಬರ್ ಮತ್ತು ಇ-ಮೇಲ್ ವಿಳಾಸ ನಮೂದಿಸುವುದು.
ಎಲ್ಲಾ ಸರ್ಕಾರಿ ಆಸ್ಪತ್ರೆ/ಖಾಸಗಿ ಆಸ್ಪತ್ರೆ ಹಾಗೂ ಮನೆಯಲ್ಲಿ ಸಂಭವಿಸುವ ಜನನ/ ಮರಣ ಪ್ರಮಾಣ ಪತ್ರಗಳನ್ನು 21 ದಿನಗಳ ಒಳಗಾಗಿ ವಿತರಿಸುವಂತೆ ಕುಶಾಲನಗರ ಪುರಸಭೆ ಜನನ/ ಮರಣ ನೊಂದಾಣಾಧಿಕಾರಿ ಅವರು ತಿಳಿಸಿದ್ದಾರೆ.








