ನವದೆಹಲಿ : ವಂಚನೆ ಹೆಚ್ಚುತ್ತಿರುವುದನ್ನ ತಡೆಯಲು ಭಾರತೀಯ ರೈಲ್ವೆ ಇಲಾಖೆ ಕಾಯ್ದಿರಿಸದ ಟಿಕೆಟ್’ಗಳಿಗೆ ಹೊಸ ನಿಯಮವನ್ನ ಪರಿಚಯಿಸಿದೆ. ಪ್ರಯಾಣಿಕರು ಇನ್ಮುಂದೆ ತಮ್ಮ ಫೋನ್’ಗಳಲ್ಲಿ ಟಿಕೆಟ್’ಗಳನ್ನು ತೋರಿಸುವಂತಿಲ್ಲ. ಈಗ ಟಿಕೆಟ್’ನ ಮುದ್ರಿತ ಪ್ರತಿ ಕಡ್ಡಾಯವಾಗಿದೆ. ವರದಿಯ ಪ್ರಕಾರ, ನಕಲಿ ಟಿಕೆಟ್’ಗಳನ್ನು ಸೃಷ್ಟಿಸುವಲ್ಲಿ ತಂತ್ರಜ್ಞಾನದ ದುರುಪಯೋಗ ತಡೆಯಲು ಈ ಬದಲಾವಣೆಯನ್ನ ತರಲಾಗಿದೆ.
ಭಾರತೀಯ ರೈಲ್ವೆ ಈ ನಿಯಮವನ್ನು ಪರಿಚಯಿಸಲು ಕಾರಣವೇನು?
ಕೃತಕ ಬುದ್ಧಿಮತ್ತೆ (Al) ಬಳಸಿ ನಕಲಿ ರೈಲು ಟಿಕೆಟ್’ಗಳನ್ನ ತಯಾರಿಸಲಾಗುತ್ತಿದೆ ಎಂಬ ಕಳವಳದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಇತ್ತೀಚೆಗೆ, ಜೈಪುರ ಮಾರ್ಗದಲ್ಲಿ ಹೆಡ್ ಟಿಕೆಟ್ ಪರೀಕ್ಷಕರು ತಮ್ಮ ಫೋನ್’ಗಳಲ್ಲಿ Al-ಜನರೇಟೆಡ್ ಟಿಕೆಟ್‌ಗಳನ್ನ ಬಳಸಿಕೊಂಡು ಪ್ರಯಾಣಿಸಲು ಪ್ರಯತ್ನಿಸುತ್ತಿರುವ ಕೆಲವು ವಿದ್ಯಾರ್ಥಿಗಳನ್ನ ಹಿಡಿದಿದ್ದಾರೆ. ವಿದ್ಯಾರ್ಥಿಗಳು ಒಂದು ಕಾಯ್ದಿರಿಸದ ಟಿಕೆಟ್ ಖರೀದಿಸಿದ್ದರು ಆದರೆ ಅದೇ ಟಿಕೆಟ್’ನಲ್ಲಿ ಏಳು ಪ್ರಯಾಣಿಕರನ್ನ ತೋರಿಸಲು Al ಬಳಸಿದ್ದರು. QR ಕೋಡ್’ಗಳು, ಪ್ರಯಾಣ ವಿವರಗಳು ಮತ್ತು ಶುಲ್ಕದ ಮಾಹಿತಿಯೊಂದಿಗೆ ಟಿಕೆಟ್’ಗಳು ನಿಜವೆಂದು ತೋರುತ್ತಿದ್ದವು, ಆದರೆ ತಪಾಸಣೆಯ ಸಮಯದಲ್ಲಿ ವಂಚನೆ ಪತ್ತೆಯಾಗಿದೆ.
BREAKING: ಸಾಗರದಲ್ಲಿ ರೈಲಿಗೆ ತಲೆಕೊಟ್ಟು ವ್ಯಕ್ತಿ ಆತ್ಮಹತ್ಯೆಗೆ ಯತ್ನ
BREAKING ; ಟಿಕೆಟ್ ಕಾಯ್ದಿರಿಸದ ರೈಲು ಪ್ರಯಾಣಿಕರು ಇನ್ಮುಂದೆ ‘ಮುದ್ರಿತ ಟಿಕೆಟ್’ ಕೊಂಡೊಯ್ಯುವುದು ಕಡ್ಡಾಯ








