ಮಂಡ್ಯ: ಜಿಲ್ಲೆಯಲ್ಲಿ ರೈಲ್ವೆ ಇಲಾಖೆಯ ಪರೀಕ್ಷೆಗಳಲ್ಲಿ ಕನ್ನಡ ಭಾಷೆ ಕಡ್ಡಾಯಕ್ಕೆ ಆಗ್ರಹಿಸಿ ಪ್ರತಿಭಟನೆಯನ್ನು ಕನ್ನಡ ಪರ ಸಂಘಟನೆಗಳಿಂದ ನಡೆಸಲಾಯಿತು. ಈ ವೇಳೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ಕನ್ನಡ ಪರ ಸಂಘಟನೆಗಳ ಮುಖಂಡರು ಹೊರ ಹಾಕಿದಂತ ಘಟನೆಯೂ ನಡೆಯಿತು.
ಮಂಡ್ಯದ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡ್ಡಾಯಗೊಳಿಸುವಂತೆ ಆಗ್ರಹಿಸಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ ನಡೆಸಲಾಯಿತು. ಕೇಂದ್ರ ಸರ್ಕಾರ ಹಾಗೂ ಸಂಸದರ ವಿರುದ್ದ ಘೋಷಣೆ ಕೂಗಿ ಆಕ್ರೋಶವನ್ನು ಹೊರ ಹಾಕಲಾಯಿತು.
ರಾಜ್ಯದ ರೈಲ್ವೆ ಇಲಾಖೆಯ ಬಡ್ತಿ ಪರೀಕ್ಷೆಯಲ್ಲಿ ಕನ್ನಡ ಭಾಷೆ ಕಡೆಗಣಿಸಿದ್ದಾರೆ. ಇಂಗ್ಲಿಷ್ ಹಾಗೂ ಹಿಂದಿ ಭಾಷೆಗೆ ಮಾತ್ರ ಒತ್ತುಕೊಟ್ಟು ಕನ್ನಡ ವಿರೋಧಿ ಧೋರಣೆ ಮಾಡಿದೆ. ರಾಜ್ಯದ ರೈಲ್ವೆ ಇಲಾಖೆ ಪರೀಕ್ಷೆಗಳನ್ನ ಕನ್ನಡ ಕಡ್ಡಾಯವಾಗಬೇಕು. ಕನ್ನಡ ಭಾಷೆಗೆ ಹೆಚ್ಚಿನ ಆದ್ಯತೆ ಸಿಕ್ಕಿ ನ್ಯಾಯ ಸಿಗಬೇಕು ಎಂಬುದಾಗಿ ಆಗ್ರಹಿಸಿದರು.
ತುಮಕೂರು ಚಾಮರಾಜನಗರ ರೈಲ್ವೆ ಮಾರ್ಗ ಅನುಷ್ಠಾನಗೊಳಿಸಿ. ಬ್ಯಾಂಕ್, ಅಂಚೆ,ಕಚೇರಿ, ರೈಲ್ವೆ ರಕ್ಷಣಾ ಆಡಳಿತದಲ್ಲಿ ಕನ್ನಡ ಕಡ್ಡಾಯವಾಗಿರಲಿ. ಕನ್ನಡದ ಬಗ್ಗೆ ರಾಜ್ಯದ ಸಂಸದರು ಧ್ವನಿ ಎತ್ತಬೇಕು. ರೈಲ್ವೆ ನಿಲ್ದಾಣದಲ್ಲಿನ್ನ ಮೂಲಭೂತ ಸಮಸ್ಯೆಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಚುನಾವಣೆ ಯಲ್ಲಿ ಕನ್ನಡಿಗರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆಯನ್ನು ಕನ್ನಡಪರ ಸಂಘಟನೆಗಳು ಮಾಡಿದವು.
ಇದೇ ವೇಳೆ ಮನವಿ ಸ್ವೀಕತಿಸಲು ಬಂದ ರೈಲ್ವೆ ಅಧಿಕಾರಿ ಹಾಗು ಪೋಲಿಸರ ಹೆಸರು ಹಿಂದಿಯಲ್ಲಿ ಇದ್ದ ಕಾರಣ ಕನ್ನಡದಲ್ಲಿ ಹೆಸರು ಹಾಕುವಂತೆ ತರಾಟೆ ತೆಗೆದುಕೊಂಡರು. ಈ ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಚ ಜಯರಾಮ್, ಎಂಬಿ ನಾಗಣ್ಣಗೌಡ, ಸೇರಿದಂತೆ ಇತರೆ ಕನ್ನಡಪರ ಸಂಘಟನಾಕಾರರು ಭಾಗಿಯಾಗಿದ್ದರು.
ವರದಿ; ಗಿರೀಶ್ ರಾಜ್, ಮಂಡ್ಯ
ರಾಜ್ಯದ ಯಜಮಾನಿಯರಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ತಿಂಗಳ ‘ಗೃಹಲಕ್ಷ್ಮೀ’ ಯೋಜನೆ ಹಣ ಖಾತೆಗೆ ಜಮಾ








